ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೆದಾಳ ಗ್ರಾಮದಲ್ಲಿ ರೋಜ್ಗಾರ್ ದಿನ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ತಾ.ಪಂ.ಇಓ ಕೆ.ತಿಮ್ಮಪ್ಪ,ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುವ ಸಲಹೆ ನೀಡಿದ್ರು.
ಅಲ್ಲದೆ,ನರೇಗಾ ಯೋಜನೆ ಅಡಿ ಸಮುದಾಯಿಕ ಕೆಲಸಗಳನ್ನ ನಿರ್ಭಂಧಿಸಲಾಗಿದ್ದು, ಬದಲಿಗೆ ವೈಯಕ್ತಿಕ ಕೆಲಸಗಳಾದ ಬದು, ಕೃಷಿಹೊಂಡ, ದನದ ದೊಡ್ಡಿ ಸೇರಿದಂತೆ ಇತರೆ ಕೆಲಸಗಳನ್ನ ನಿರ್ವಹಿಸುವಂತೆ ತಿಳಿಸಿದರು.
ಇನ್ನು,ಕಾಯಕ ಮಿತ್ರ ಆ್ಯಪ್ ಕುರಿತು ಕೃಷಿಕರಿಗೆ ಮಾಹಿತಿ ನೀಡಿದರು.