ಕೊಪ್ಪಳ : ತಾಲೂಕಿನ ಕವಲೂರು ಹಾಗೂ ಹಂದ್ರಾಳ ಮಧ್ಯದ ಹಳ್ಳವೊಂದಕ್ಕೆ ಇತ್ತೀಚೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕೊಚ್ಚಿಹೋಗಿದೆ. ಕವಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ಸುತ್ತಮುತ್ತ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು.
ಕವಲೂರಿನ ಬಹುತೇಕ ರೈತರು ತಮ್ಮ ಜಮೀನುಗಳಿಗೆ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಸೇತುವೆ ಬಿದ್ದು ಹೋಗಿರುವುದರಿಂದ ಅವರಿಗೆಲ್ಲ ತೊಂದರೆಯಾಗಿದೆ. ಕೇವಲ 10 ಕಿ. ಮೀ ದೂರವನ್ನ ಸುಮಾರು 30-35 ಕಿ. ಮೀ ಸುತ್ತಿ ಬಳಸಿ ಸಂಚರಿಸಬೇಕಾಗಿದೆ.
ಕಳಪೆ ಕಾಮಗಾರಿ : ಸೇತುವೆ ಕೊಚ್ಚಿಕೊಂಡು ಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಟ್ಟು 80 ಲಕ್ಷ ರೂಪಾಯಿ ಯೋಜನೆಯ ಸೇತುವೆ ಇದಾಗಿದ್ದು, ಸರ್ಕಾರದಿಂದ 40 ಲಕ್ಷ ರೂಪಾಯಿ ಮಂಜೂರಾಗಿದೆ. ಸದ್ಯ ಜನರ ಅನುಕೂಲಕ್ಕಾಗಿ ಈಗ 20 ಲಕ್ಷ ರೂಪಾಯಿಯಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಕುರಿತು ಮತ್ತೆ ಯೋಜನೆ ತಯಾರಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭೂಸೇನಾ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ.
ಓದಿ: ರಾಷ್ಟ್ರಪತಿ ಹುದ್ದೆಗೆ ಹೆಚ್ ಡಿ ದೇವೇಗೌಡರು ಸ್ಪರ್ಧಿಸಲ್ಲ: ಮಾಜಿ ಸಿಎಂ ಹೆಚ್ಡಿಕೆ ಸ್ಪಷ್ಟನೆ