ಗಂಗಾವತಿ : ತಾಲೂಕಿನ ಸಣಾಪುರದ ಜಲಾಶಯದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ಪ್ರವಾಸಿಗರ ಪ್ರಾಣಕ್ಕೆ ಎರವಾಗುತ್ತಿದ್ದ ನಾಡದೋಣಿಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಈ ಬಗ್ಗೆ ಈಟಿವಿ ಭಾರತ 'ಲೈಫ್ ಜಾಕೆಟ್ ಇಲ್ಲದೇ ದೋಣಿ ಸಂಚಾರ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಈ ಜಲ ವಿಹಾರ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ ತಹಶೀಲ್ದಾರ್ ವಿರೇಶ ಬಿರಾದಾರ್ ನೇತೃತ್ವದಲ್ಲಿ ದಾಳಿ ಮಾಡಿ ನಾಡದೋಣಿಗಳನ್ನು (ಹರಗೋಲು) ವಶಕ್ಕೆ ಪಡೆದು ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಸಣಾಪುರದ ಗ್ರಾಮ ಪಂಚಾಯತ್‌ಗೆ ಪತ್ರ ಬರೆದು ಸೂಚನೆ ನೀಡಿರುವ ತಹಶೀಲ್ದಾರ್ ಬಿರಾದಾರ್, ಸಣಾಪುರ ಜಲಾಶಯ ಮತ್ತು ಹನುಮನಹಳ್ಳಿಯಿಂದ ಋಷಿಮುಖ ಪರ್ವತಕ್ಕೆ ಹೋಗಲು ಬಳಸುವ ಹರಗೋಲ ಸಂಚಾರ ಸ್ಥಗಿತಗೊಳಸುವಂತೆ ಪಿಡಿಒಗೆ ಆದೇಶ ನೀಡಿದ್ದಾರೆ.