ಕುಷ್ಟಗಿ(ಕೊಪ್ಪಳ): ಲಾಕ್ಡೌನ್ನಿಂದಾಗಿ ಬಂದ್ ಆಗಿದ್ದ ಮದ್ಯದ ಅಂಗಡಿಗಳು ಇಂದು ಪುನಾರಾರಂಭಗೊಂಡಿದ್ದು, ಸುಡು ಬಿಸಿಲಿನಲ್ಲಿಯೂ ಎಣ್ಣೆ ಖರೀದಿ ಜೋರಾಗಿತ್ತು.
ಮದ್ಯದ ಅಂಗಡಿ ತೆರೆಯುವುದಕ್ಕೂ ಮುನ್ನವೇ ಜಮಾಯಿಸಿದ್ದ ಪಾನಪ್ರಿಯರು, ತಲೆ ತಿರುಗುವಷ್ಟು ಬಿಸಿಲಿದ್ದರೂ ಸಹ ಮದ್ಯ ಪಡೆದುಕೊಂಡೇ ಮನೆಗೆ ಹೋಗುವ ಉತ್ಸಾಹದಲ್ಲಿದ್ದರು. ಎಣ್ಣೆ ಪಡೆಯುವ ಹರಸಾಹಸದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತ ಪಾನಪ್ರಿಯರನ್ನು ಸರಿಪಡಿಸುವುದರಲ್ಲಿ ಬಾರ್ ಸಿಬ್ಬಂದಿಗಳಿಗೆ ಸಾಕು ಸಾಕಾಗಿ ಹೋಯಿತು.
ಲಾಕ್ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿರುವುದು ವ್ಯಾಪಾರಿಗಳು, ಮದ್ಯ ವ್ಯಸನಿಗಳಿಗೆ ಖುಷಿ ಎನಿಸಿದರೆ, ಲಾಕ್ಡೌನ್ ಮಧ್ಯೆಯೂ ವೈನ್ ಶಾಪ್ ತೆರೆದಿರುವುದರಿಂದ ಕೆಲ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ಯ ನಿಷೇಧಿಸುವಂತೆ ಕುಷ್ಟಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.