ETV Bharat / state

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮೇಲೆ ಹಲ್ಲೆ ಪ್ರಕರಣ: 12 ಜನರ ಮೇಲೆ ಕೇಸ್ ದಾಖಲು - BJP women wing leader gave complaint against people

ಬಿಜೆಪಿಯ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಪುಷ್ಪಾಂಜಲಿ ಗುನ್ನಾಳ ಮೇಲೆ ಹಲ್ಲೆ ನಡೆಸಿದ 12 ಜನರ ಮೇಲೆ ಇದೀಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bjp
ಮಹಿಳಾ ಮೋರ್ಚಾ ಉಪಾಧ್ಯಕ್ಷೆ
author img

By

Published : Jun 24, 2021, 11:48 AM IST

ಗಂಗಾವತಿ(ಕೊಪ್ಪಳ): ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆದು ತನ್ನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಪುಷ್ಪಾಂಜಲಿ ಗುನ್ನಾಳ, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿರುಪಾಪುರದ ತಮ್ಮ ಪ್ಲಾಂಟಿನಲ್ಲಿದ್ದ ಕಲ್ಲುಗಳನ್ನು ತೆರವು ಮಾಡುತ್ತಿರುವ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದ ಒಂದಿಷ್ಟು ಜನ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಒಟ್ಟು 12 ಜನರ ಮೇಲೆ ದೂರು ದಾಖಲಿಸಿದ್ದಾರೆ. ದಾನಪ್ಪ, ಗಿರಿಜಮ್ಮ, ಶರಣಮ್ಮ, ಉಮಾದೇವಿ, ಅಮರೇಶ, ಸಂಜಯ್, ಸೋಮಶೇಖರ ಎಂಬುವವರ ಮೇಲೆ ಐಪಿಸಿಯ ವಿವಿಧ ಕಲಂಗಳ ಮೇಲೆ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆ ವೀರೇಶ ಮೇಲೆ ಹಲ್ಲೆಯಾಗಿದ್ದರ ಬಗ್ಗೆ ಒಂದು ದೂರು ದಾಖಲಾಗಿತ್ತು.

ಇದನ್ನೂ ಓದಿ: Video: ಮಹಿಳೆಗೆ ಥಳಿಸುತ್ತಿದ್ದವರ ತಡೆಯಲು ತೆರಳಿದ ಕಾನ್ಸ್​ಟೇಬಲ್ ಮೇಲೂ ಇಬ್ಬರಿಂದ ಹಲ್ಲೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.