ETV Bharat / state

ಚೆಕ್‌ ಡ್ಯಾಂ ನಿರ್ಮಾಣದ ಹೆಸರಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿ ಆರೋಪ - ಚೆಕ್‌ಡ್ಯಾಂ ನಿರ್ಮಾಣ ಹೆಸರಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿ

ವಾಸ್ತವವಾಗಿ ಆ ಪ್ರದೇಶದಲ್ಲಿ ಏನೂ ಕೆಲಸ ಆಗಿಲ್ಲ ಎನ್ನಲಾಗಿದೆ. ನಕಲಿ ಬಿಲ್ ಸೃಷ್ಟಿಸಿ, ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಗ್ರಾಮದ ಪರಶುರಾಮ್ ಗಡಾದ್ಮ ಬಸಪ್ಪ ಕಟ್ಟಿಮನಿ, ರಮೇಶ ಗುಡಿಹೊಲ ಒತ್ತಾಯಿಸಿದ್ದಾರೆ.

kustagi
ಕಾಮಗಾರಿ ನಡೆಸದೆ ಬಿಲ್ ಪಾವತಿ
author img

By

Published : Jul 6, 2020, 7:46 PM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಹಿರೇನಂದಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿ ಇಲ್ಲದೇ ಬಿಲ್ ಪಾವತಿಯಾಗಿರುವ ಆರೋಪ ಕೇಳಿ ಬಂದಿದೆ.

kustagi
ಕಾಮಗಾರಿ ನಡೆಸದೆ ಬಿಲ್ ಪಾವತಿ ಆರೋಪ

ಗ್ರಾಮದ ಬಾಲಪ್ಪ ಯಂಕಪ್ಪ ಗೊಲ್ಲರ್ ಇವರ ಹೊಲದ ಬಳಿ 1,41,930 ರೂ. ವೆಚ್ಚದಲ್ಲಿ 570 ಮಾನವ ದಿನಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ, ಬಾಳಮ್ಮ ವಾಲೀಕಾರ ಎಂಬುವರ ಜಮೀನಿನ ಬಳಿ ನಾಲೆಗೆ 1,15,785 ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ 465 ಮಾನವ ದಿನಗಳ ಕೆಲಸವಾಗಿದೆ. ಇದೇ ಗ್ರಾಮದ ಕರಿಯಪ್ಪ ಶೆಟ್ಟರ್ ಎಂಬುವರ ಜಮೀನಿನ ನಾಲೆಗೆ 29,880 ರೂ., 120 ಮಾನವ ದಿನಗಳ ಕೆಲಸದ ಬಗ್ಗೆ ಮಾಹಿತಿ ನೀಡಲಾಗಿದೆ.

ಆದರೆ ವಾಸ್ತವವಾಗಿ ಆ ಪ್ರದೇಶದಲ್ಲಿ ಏನೂ ಕೆಲಸ ಆಗಿಲ್ಲ ಎನ್ನಲಾಗಿದೆ. ನಕಲಿ ಬಿಲ್ ಸೃಷ್ಟಿಸಿ, ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಗ್ರಾಮದ ಪರಶುರಾಮ್ ಗಡಾದ್ಮ ಬಸಪ್ಪ ಕಟ್ಟಿಮನಿ, ರಮೇಶ ಗುಡಿಹೊಲ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.