ETV Bharat / state

ನಮ್ಮಲ್ಲಿ ಯಾವುದೇ ಟೀಂ ಇಲ್ಲ, ನಾವೆಲ್ಲ ಬಿಜೆಪಿ ಟೀಂ: ಕೃಷಿ ಸಚಿವ ಬಿ ಸಿ ಪಾಟೀಲ್ - republic day celebration 2021

ಅರಣ್ಯ ಖಾತೆಯಲ್ಲಿ ಕೆಲಸ ಮಾಡಿದ್ದ ಆನಂದ ಸಿಂಗ್ ಅವರಿಗೆ ಖಾತೆ ಬದಲಾವಣೆಯಿಂದ ಒಂದಿಷ್ಟು ಅಸಮಾಧಾನವಾಗಿರಬಹುದು. ನಾಳೆ ಸಿಎಂ ಭೇಟಿ ಮಾಡುವುದಾಗಿ ಆನಂದ ಸಿಂಗ್ ನನಗೆ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಟೀಂ ಇಲ್ಲ, ನಾವೆಲ್ಲ ಬಿಜೆಪಿ ಟೀಂ ಅಷ್ಟೇ ಅಂತಾ ಕೊಪ್ಪಳದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್​ ಹೇಳಿದ್ದಾರೆ.

bc patil talks during republic day celebration
ಕೃಷಿ ಸಚಿವರ ಪ್ರತಿಕ್ರಿಯೆ
author img

By

Published : Jan 26, 2021, 1:21 PM IST

ಕೊಪ್ಪಳ: 72 ನೇ ಗಣರಾಜ್ಯೋತ್ಸವವನ್ನು ಕೊಪ್ಪಳದಲ್ಲಿಯೂ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲಾಡಳಿತದಿಂದ ನಗರದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ ಸಿ ಪಾಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಕೃಷಿ ಸಚಿವರ ಪ್ರತಿಕ್ರಿಯೆ

ಲಾಕ್​ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳು ನಿಲ್ಲಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ರೈತರ ಕೆಲಸಕ್ಕೆ ಅನುವು‌ ಮಾಡಿಕೊಟ್ಟಿತು ಎಂದು ಹೇಳಿದರು. ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿವೆ‌.

2008, 2013, 2019 ರಲ್ಲಿ ಯಾರು ನಮ್ಮ ಸರ್ಕಾರವನ್ನು ತೆಗೆದು ಹಾಕ್ತೇವೆ ಎಂದು ಹೇಳಿದ್ದರೋ ಅವರು ಈ ಕಾಯ್ದೆಗಳ ಕುರಿತು ರೈತರನ್ನು ಪ್ರಚೋದಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಸುವವ್ಯಸ್ಥೆ ಹಾಗೂ ಸಂಚಾರ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಟ್ರ್ಯಾಕ್ಟರ್​ಗಳನ್ನು ಸೀಜ್ ಮಾಡುತ್ತಿರಬಹುದು‌ ಎಂದರು.

ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಮರಳು ದಂಧೆ ನಡೆಸುತ್ತಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅದು ಯಾವುದೇ ಅಕ್ರಮ ಚಟುವಟಿಕೆಯಾಗಿರಬಹುದು. ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಆದೇಶ ಮಾಡಿದ್ದೇನೆ ಎಂದು ಖಡಕ್​ ಎಚ್ಚರಿಕೆ ರವಾನಿಸಿದರು.

ಸಚಿವರ ಖಾತೆ ಬದಲಾವಣೆ ಮಾಡೋದು ಸಿಎಂ ಅವರ ವಿವೇಚನೆಗೆ ಬಿಟ್ಟ ವಿಚಾರ. ಸಿಎಂ ಅವರು ಹಿರಿಯ ಮುತ್ಸದ್ಧಿ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ಅರಣ್ಯ ಖಾತೆಯಲ್ಲಿ ಕೆಲಸ ಮಾಡಿದ್ದ ಆನಂದ ಸಿಂಗ್ ಅವರಿಗೆ ಖಾತೆ ಬದಲಾವಣೆಯಿಂದ ಒಂದಿಷ್ಟು ಅಸಮಾಧಾನವಾಗಿರಬಹುದು. ನಾಳೆ ಸಿಎಂ ಭೇಟಿ ಮಾಡುವುದಾಗಿ ಆನಂದ ಸಿಂಗ್ ನನಗೆ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಟೀಂ ಇಲ್ಲ, ನಾವೆಲ್ಲ ಬಿಜೆಪಿ ಟೀಂ ಅಷ್ಟೆ ಅಂದ್ರು.

ಇನ್ನು ಎಚ್‌. ವಿಶ್ವನಾಥ್​ ಅವರನ್ನು ವಿಧಾನ ಪರಿಷತ್​ಗೆ ಸರ್ಕಾರ ನಾಮನಿರ್ದೇಶನ ಮಾಡಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಲು ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಅವರು ಸಚಿವರಾಗಿಲ್ಲ ಎಂದು ಸಚಿವ ಬಿಸಿ‌ ಪಾಟೀಲ್ ಹೇಳಿದರು. ಲೆಟರ್ ಪ್ಯಾಡ್ ದುರ್ಬಳಕೆ ವಿಚಾರ ಹಳೆಯದು. ಈಗ ನನಗೆ ಯಾವ ಪಿಎ ಅಗತ್ಯವಿಲ್ಲ. ಪಿಎ ಇಟ್ಕೊಂಡು ಸಚಿವಗಿರಿ ಮಾಡುವಂತಹದ್ದು ಏನೂ ಇಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಇದೇ ಸಂದರ್ಭದಲ್ಲಿ ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.