ETV Bharat / state

ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ, ಮಾ. 23ಕ್ಕೆ ಸಿಎಂ ಜೊತೆ ಸಭೆ: ಶಾಸಕ ಯತ್ನಾಳ್​ - ಬಸವಜಯಮೃತ್ಯುಂಜಯ ಸ್ವಾಮಿ

ಬಸವಜಯಮೃತ್ಯುಂಜಯ ಸ್ವಾಮಿಗಳಿಗೆ ಮೀಸಲಾತಿ ನೀಡುವವರೆಗೂ ಹೋರಾಟ ಬಿಡಬೇಡಿ ಎಂದು ಹೇಳಿದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್
ಶಾಸಕ ಬಸನಗೌಡ ಯತ್ನಾಳ್
author img

By

Published : Mar 19, 2023, 10:40 PM IST

ಶಾಸಕ ಬಸನಗೌಡ ಯತ್ನಾಳ್

ಕೊಪ್ಪಳ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಮಾರ್ಚ್ 23ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆದಿದ್ದು, ನಮ್ಮ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಲೇಬೇಕು ಎಂದು ಒತ್ತಾಯಿಸಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್​ ಹೇಳಿದರು.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿಯಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಚೆನ್ನಮ್ಮ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ನಮ್ಮ ಸಮಾಜದ ಕೆಲವು ರಾಜಕಾರಣಿಗಳಿಗೆ ಅವರು ಮಂತ್ರಿಯಾಗುವವರಿಗೂ ಪಂಚಮಸಾಲಿ ಬೇಕು. ಅಧಿಕಾರ ಸಿಕ್ಕ ಮೇಲೆ ಸಮಾಜ ಬೇಡವಾಗಿದೆ. ಮಂತ್ರಿಯಾದ ನಂತರ ಸಾವಿರಾರು ಕೋಟಿ ರೂಪಾಯಿ ಹಣ ಮಾಡಿಕೊಂಡು ಮಜಾ ಮಾಡುತ್ತಾರೆ. ಸಮಾಜದ ಒಳಿತಿಗೆ ಬೆನ್ನೆಲುಬಾಗಿ ನಿಲ್ಲುತ್ತಿಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿಗೆ ಕುಟುಕಿದರು.

ರಾಜ್ಯದಲ್ಲಿ ಇಲ್ಲಿಯವರೆಗೂ ಮೀಸಲಾತಿ ಹೋರಾಟ ಜೀವಂತವಿಟ್ಟಿದ್ದು ಕೂಡಲಸಂಗಮದ ಜಯಮೃತ್ಯಂಜಯ ಸ್ವಾಮಿಗಳು. ಸದ್ಯ ಚುನಾವಣೆ ಬಂದಿದೆ ಹೋರಾಟ ಬಿಡಿ ಎಂದು ಕೆಲವರು ಶ್ರೀಗಳಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ, ನಾನು ಬಸವಜಯಮೃತ್ಯುಂಜಯ ಸ್ವಾಮಿಗಳಿಗೆ ಮೀಸಲಾತಿ ನೀಡುವವರೆಗೂ ಹೋರಾಟ ಬಿಡಬೇಡಿ ಎಂದಿದ್ದೇನೆ ಎಂದರು.

ಇದನ್ನೂ ಓದಿ : ಎಸ್ ಬಿ ಮಿನರಲ್ಸ್ ಒಡೆತನದ ಎರಡು ಗಣಿ ಕಂಪನಿಗೆ ಸೇರಿದ 5.21 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಜಪ್ತಿ

ಸ್ವಲ್ಪ ದಿನದಲ್ಲಿ ಇವರೆಲ್ಲ ಮನೆಗೆ ಹೋಗುತ್ತಾರೆ: ಮೀಸಲಾತಿ ನೀಡಲು ನೇಮಿಸಿರುವ ಅಧ್ಯಯನ ಸಮಿತಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಈ ಸಮಿತಿಗೆ ನೇಮಕವಾಗಿರುವ ಹೆಗಡೆ ಎಂಬುವವನು ಅರ್ಧ ಬಿಜೆಪಿ, ಅರ್ಧ ಕಾಂಗ್ರೆಸ್ ನವನಂತೆ ವರ್ತಿಸುತ್ತಿದ್ದಾನೆ. ಅಧ್ಯಯನ ಪೂರ್ಣ ಗೊಳಿಸಲು ಇನ್ನು ಆರು ತಿಂಗಳು ಸಮಯ ಕೇಳುತ್ತಿದ್ದಾನೆ. ಅವನೇನು ಅಧ್ಯಯನ ಮಾಡ್ತಾನೊ ಏನು ಮಜಾ ಮಾಡ್ತಾನೊ ಗೊತ್ತಾಗುತ್ತಿಲ್ಲ. ಇನ್ನು, ಸ್ವಲ್ಪ ದಿನದಲ್ಲಿ ಇವರೆಲ್ಲ ಮನೆಗೆ ಹೋಗುತ್ತಾರೆ ಎಂದು ಲೇವಡಿ ಮಾಡಿದರು.

ನಮ್ಮ ಸಮಾಜದವರೆ ಮೀಸಲಾತಿ ನೀಡದಂತೆ ಕುತಂತ್ರ ಮಾಡುತ್ತಿದ್ದಾರೆ. ಈ ಹಿಂದೆ ವೀರರಾಣಿ ಕಿತ್ತೂರು ಚೆನ್ಮಮ್ಮನಿಗೆ ಹೇಗೆ ನಮ್ಮವರೇ ಮೋಸ ಮಾಡಿದರೊ ಹಾಗೇ ಈಗ ನಮ್ಮವರೇ ನಮಗೆ ಮೀಸಲಾತಿ ನೀಡದಂತೆ ಮೋಸ ಮಾಡುತ್ತಿದ್ದಾರೆ ಎಂದು ಯತ್ನಾಳ್​ ಆರೋಪಿಸಿದರು.

ಇದನ್ನೂ ಓದಿ: ನನ್ನ ಫೋನ್​ ಸಿಡಿಆರ್​ ಆಗಿದೆ, ಖಾಸಗಿ ಬದುಕಿನ ಡಿಟೈಲ್ಸ್ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ: ಎಂ ಬಿ ಪಾಟೀಲ

ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ: ನಾನು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ನನಗೂ ಮಂತ್ರಿ ಗಿರಿ ಸಿಗುತ್ತಿತ್ತು. ಆದರೆ, ನಾನು ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ. ನೀವೆಲ್ಲ ನನ್ನನ್ನ ಭಾವಿ ಸಿಎಂ ಅಂತ ಕೂಗಬೇಡಿ, ನಮ್ಮಲ್ಲಿ ನಾಲ್ಕು ಮಂದಿಗೆ ಅದನ್ನ ಕೇಳಿದರೆ ಹೊಟ್ಟೆಯೊಳಗ ಸಂಕಟವಾಗುತ್ತದೆ. ಅವರು ತಮ್ಮ ಮಕ್ಕಳನ್ನು ಸಿಎಂ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಕುರಿತು ಯತ್ನಾಳ್​ ಹಾರಿಹಾಯ್ದರು.

ಇದನ್ನೂ ಓದಿ: ವಿಧಾನಸಭೆಗೆ ಸ್ಪರ್ಧೆ : ಹೈಕಮಾಂಡ್ ಕೃಪಾಕಟಾಕ್ಷಕ್ಕೆ ಕಾಯುತ್ತಿರುವ ಸಂಸದರು, ಮಾಜಿ ಸಂಸದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.