ಕುಷ್ಟಗಿ (ಕೊಪ್ಪಳ): ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ದಾಳಿ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ, ಭೋವಿ ಸಮಾಜದಿಂದ ಉಪ ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರಚೋಧಿತ ಗಲಭೆಯಲ್ಲಿ ಜನ ಪ್ರತಿನಿಧಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಜನ ರಕ್ಷಕರಾದ ಪೊಲೀಸರನ್ನು ಟಾರ್ಗೆಟ್ ಮಾಡಿದ್ದಾರೆ. ಹಿಂದುಳಿದ ಭೋವಿ ಸಮಾಜದವರಾದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಗುರಿಯಾಗಿಸಿಕೊಂಡು ಒಂದು ಕೋಮಿನ ಜನ ಮಾಡಿರುವ ದಾಳಿಯನ್ನು ಖಂಡಿಸುತ್ತೇವೆ.
ಈ ಪ್ರಕರಣನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಭೋವಿ ಸಮಾಜದ ಅಧ್ಯಕ್ಷ ಗೋವಿಂದ್ ವಡ್ಡರ್, ನಾಗರಾಜ ಭೋವಿ, ಶೇಖಪ್ಪ ಮ್ಯಾಗೇರಿ, ಯಂಕಪ್ಪ ಹಿರೇಮನಿ, ತಿಪ್ಪಣ್ಣ ಹಿರೇಮನಿ, ಹನಮಂತಪ್ಪ ಬಿಜಕಲ್, ಮುತ್ತಣ್ಣ ಅಮರಾವತಿ, ಈರಪ್ಪ ನಿಡಗುಂದಿ, ಮುತ್ತಣ್ಣ ಮ್ಯಾಗೇರಿ, ಶರಣಪ್ಪ ಬೋದೂರು, ಯಮನೂರ ಮತ್ತಿತರರು ಒತ್ತಾಯಿಸಿದರು.