ಕೊಪ್ಪಳ : ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷಕ್ಕೆ ಕಂದಮ್ಮ ಬಲಿಯಾದ ಘಟನೆ ಜಿಲ್ಲೆಯ ಮುರುಡಿ ಗ್ರಾಮದಲ್ಲಿ ನಡೆದಿದೆ. ಜಲಜೀವನ್ ಮಿಷನ್ ಕಾಮಗಾರಿಯ ಗುಂಡಿಗೆ ಬಿದ್ದು ಮಗು ಸಾವನ್ನಪಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ಜೆಜೆಎಂ (ಜಲ ಜೀವನ್ ಮಿಷನ್) ಕಾಮಗಾರಿಗೆ ಒಂದು ತಿಂಗಳ ಹಿಂದೆ ಗುಂಡಿ ತೋಡಲಾಗಿತ್ತು. ಆ ಗುಂಡಿಯನ್ನು ಮುಚ್ಚಿರಲಿಲ್ಲ. ಜೆಜೆಎಂ ಕಾಮಗಾರಿಯ ಪೈಪ್‌ಲೈನ್ ಒಡೆದು ಗುಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಆಟವಾಡುವ ವೇಳೆ ಮಗು ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ್ಥರ ಆರೋಪಿಸುತ್ತಿದ್ದಾರೆ. ಜೆಜೆಎಂ ಕಾಮಗಾರಿಗಾಗಿ ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆಗಳನ್ನು ಬಿಡಲಾಗಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಲತಾ ಮಂಗೇಶ್ಕರ್ ದೇವಸ್ಥಾನ ಕಟ್ಟಲು ಮುಂದಾದ ಗಾಯಕ : 6 ತಿಂಗಳೊಳಗೆ ದೇವಾಲಯ ನಿರ್ಮಾಣ