ETV Bharat / state

ಸಾಲ ತೀರಿಸಲು ಆಸ್ತಿ ಮಾರಾಟಕ್ಕೆ ಸಿಗದ ಅನುಮತಿ : ಮಹಿಳೆಯ ಪರದಾಟ

ಸಾಲ ಹಾಗೂ ಮಕ್ಕಳ ಮದುವೆಯ ಹೊಣೆ ಹೊತ್ತಿರುವ ಮಂಜುಳಾ ಅವರು, ಕೃಷಿ ಜಮೀನು ಮಾರಾಟ ಮಾಡಲು ಅವಕಾಶ ನೀಡುವಂತೆ ಸೂಕ್ತ ದಾಖಲೆಗಳೊಂದಿಗೆ 16 ಜನವರಿ 2019ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು..

Gangavati
Gangavati
author img

By

Published : Sep 14, 2020, 9:46 PM IST

ಗಂಗಾವತಿ : ಗಂಡನ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲು ತುರ್ತ ಹಣದ ಅಗತ್ಯವಿದ್ದು, ಕುಟುಂಬಕ್ಕೆ ಆಧಾರವಾಗಿರುವ ಜಮೀನು ಮಾರಾಟ ಮಾಡಲು ಅವಕಾಶ ನೀಡುವಂತೆ ಮಹಿಳೆಯೊಬ್ಬರು ಕಳೆದ ಎರಡು ವರ್ಷದಿಂದ ಕಂದಾಯ ಇಲಾಖೆಗೆ ಅಲೆಯುತ್ತಿರುವ ಘಟನೆ ನಡೆದಿದೆ.

21ನೇ ವಾರ್ಡ್‌ನ ನಿವಾಸಿ ಮಂಜುಳಾ ಅವರ ಗಂಡ ಯಮನೂರು ಅವರು 2010ರಲ್ಲಿ ನಿಧನ ಹೊಂದಿದ್ದರು. ಇದಾದ ಬಳಿಕ ಅವರ ಗಂಡನ ಹೆಸರಲ್ಲಿದ್ದ ಜಂಗಮರ ಕಲ್ಗುಡಿ ಗ್ರಾಮದ 1.15 ಎಕರೆ ಜಮೀನನ್ನು ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಗಂಡನ ಚಿಕಿತ್ಸೆಗಾಗಿ ಮಾಡಿದ ಸಾಲ ಹಾಗೂ ಮಕ್ಕಳ ಮದುವೆಯ ಹೊಣೆ ಹೊತ್ತಿರುವ ಮಂಜುಳಾ, ಕೃಷಿ ಜಮೀನು ಮಾರಾಟ ಮಾಡಲು ಅವಕಾಶ ನೀಡುವಂತೆ ಸೂಕ್ತ ದಾಖಲೆಗಳೊಂದಿಗೆ 16 ಜನವರಿ 2019ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಈಗಾಗಲೇ ಎರಡು ಬಾರಿ ಅರ್ಜಿ ಸಲ್ಲಿಸಿದ್ರೂ ಸಂಬಂಧಿತ ಅಧಿಕಾರಿಗಳು ಮಾತ್ರ ಕಡತ ವಿಲೇವಾರಿಗೆ ಮನಸ್ಸು ಮಾಡಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.