ಗಂಗಾವತಿ(ಕೊಪ್ಪಳ) : ಅಂಜನಾದ್ರಿ ಅಭಿವೃದ್ಧಿಗೆ ಅಗತ್ಯವಿರುವ ಪ್ರತಿ ಎಕರೆ ಜಮೀನಿಗೆ ಜಿಲ್ಲಾಡಳಿತ 42 ರಿಂದ 57 ಲಕ್ಷ ಮೊತ್ತದ ಹಣ ನೀಡಲು ನಿಗದಿ ಮಾಡಿದ್ದು, ರೈತರ ಇದಕ್ಕೆ ಒಪ್ಪದ ಹಿನ್ನೆಲೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಸ್ವಾಧೀನ ಪ್ರಕ್ರಿಯೆ ಮುಂದಾದ ಘಟನೆ ತಾಲೂಕಿನ ಆನೆಗೊಂದಿಯಲ್ಲಿ ನಡೆಯಿತು. ಸರ್ಕಾರದ ನಿಯಮಗಳ ಪ್ರಕಾರ ನೋಂದಣಿ ಇಲಾಖೆಯಲ್ಲಿ ನಿಗದಿಯಾದ ದರಕ್ಕೆ ಐದು ಪಟ್ಟು ಹೆಚ್ಚುವರಿ ನೀಡಲಾಗುವುದು.
ಅಲ್ಲದೇ ಈ ಮೊತ್ತಕ್ಕೆ ಸಿಎಂ ವಿವೇಚನೆಯಡಿ ಹೆಚ್ಚುವರಿ ಶೇ.20ರಷ್ಟು ಪರಿಹಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ರೈತರಿಗೆ ವಿವರಣೆ ನೀಡಿದರು. ಆದರೆ, ಇದಕ್ಕೆ ಒಪ್ಪದ ರೈತರು ಮಾರುಕಟ್ಟೆಯಲ್ಲಿ ಒಂದೊಂದು ಎಕರೆ ಜಮೀನಿಗೆ 70ರಿಂದ 80 ಲಕ್ಷ ಮೌಲ್ಯವಿದೆ.
ಕೃಷಿಯನ್ನು ನಂಬಿ ಬದುಕಿದ್ದು, ತಲಾ 70 ಲಕ್ಷ ಮಂಜೂರು ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ಅಗತ್ಯ ಜಮೀನು ವಶಪಡಿಸಿಕೊಳ್ಳಲು ಭೂಸ್ವಾಧೀನ ಪ್ರಕ್ರಿಯೆ ಹಸ್ತಾಂತರಿಸಲಾಗುವುದು ಎಂದರು.
ಇದನ್ನೂ ಓದಿ: ಕೊಪ್ಪಳ: ವರ್ಗಾವಣೆಗೊಂಡ ಡಿಸಿ ದಂಪತಿಯಿಂದ ದುರ್ಗಾ ದೇಗುಲದಲ್ಲಿ ಹೋಮ - ಹವನ