ETV Bharat / state

ಅಂಗನವಾಡಿಗಳಲ್ಲೇ ಎಲ್​ಕೆಜಿ, ಯುಕೆಜಿ ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ

ಎಲ್​ಕೆಜಿ, ಯುಕೆಜಿ ಆರಂಭಿಸುವುದಾದರೆ ಅಂಗನವಾಡಿಗಳಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Anganwadi workers protest in koppal
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
author img

By

Published : Sep 21, 2020, 3:28 PM IST

ಕೊಪ್ಪಳ: ಸರ್ಕಾರ ಎಲ್​ಕೆಜಿ, ಯುಕೆಜಿ ಆರಂಭಿಸುವುದಾದರೆ ಅಂಗನವಾಡಿಗಳಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸರ್ಕಾರ ಎಲ್​ಕೆಜಿ, ಯುಕೆಜಿ ಪ್ರಾರಂಭಿಸುವ ಚಿಂತನೆ ನಡೆಸಿದೆ‌. ಕಾನ್ವೆಂಟ್​ಗಳಿಂದಾಗಿ ಈಗಾಗಲೇ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರ ಎಲ್​ಕೆಜಿ ಹಾಗೂ ಯುಕೆಜಿಗಳನ್ನು ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಆರಂಭಿಸಿದರೆ ಮಕ್ಕಳು ಅಂಗನವಾಡಿಗಳಿಗೆ ಬರದಂತಾಗುತ್ತದೆ. ಇದರಿಂದ ಸುಮಾರು 45 ವರ್ಗಳಿಂದ ನಡೆದುಕೊಂಡು ಬಂದಿರುವ ಐಸಿಡಿಎಸ್ ಯೋಜನೆಯ ಗತಿ ಏನು? ಅಲ್ಲದೆ ಅಂಗನವಾಡಿಗಳ ಗತಿ ಏನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಅಂಗನವಾಡಿಗಳಲ್ಲೇ ಎಲ್​ಕೆಜಿ, ಯುಕೆಜಿ ಆರಂಭಿಸುವಂತೆ ಪ್ರತಿಭಟನೆ

ಸರ್ಕಾರ ಒಂದು ವೇಳೆ ಎಲ್​ಕೆಜಿ, ಯುಕೆಜಿ ಪ್ರಾರಂಭಿಸುವುದಾದರೆ ಅಂಗನವಾಡಿಗಳಲ್ಲೇ ಪ್ರಾರಂಭಿಸಬೇಕು. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ. ಪಠ್ಯಪುಸ್ತಕಗಳು, ಮಕ್ಕಳಿಗೆ ಸಮವಸ್ತ್ರ ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮುಖಂಡರಾದ ಬಸವರಾಜ ಶೀಲವಂತರ, ಎ.ಬಿ.ದಿಂಡೂರ, ಎ.ಜಿ.ಮಣ್ಣೂರ, ಮಮತಾಜ್ ಕಂದಗಲ್, ಮರಿಬಸಮ್ಮ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.