ETV Bharat / state

ಗಂಗಾವತಿ : ನಿಧಿಗಳ್ಳರಿಂದ ದೇವಘಾಟದ ಪ್ರಾಚೀನ ದೇಗುಲ ಧ್ವಂಸ - ಗಂಗಾವತಿಯ ದೇವಘಾಟದ ಪ್ರಾಚೀನ ದೇಗುಲ ಧ್ವಂಸ

ಶುಕ್ರವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ್ ಕೊಳ್ಳಾ ಎಂಬುವರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೇಗುಲವನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ..

ancient-temple-wreck-in-devaghat-by-treasure-hunters
ದೇವಘಾಟದ ಪ್ರಾಚೀನ ದೇಗುಲ ಧ್ವಂಸ
author img

By

Published : Dec 31, 2021, 7:34 PM IST

ಗಂಗಾವತಿ : ನಿಧಿ ಆಸೆಗಾಗಿ ದುಷ್ಕರ್ಮಿಗಳು ನಗರದ ಹೊರವಲಯದಲ್ಲಿರುವ ದೇವಘಾಟದ ಪ್ರಾಚೀನ ದೇವಾಲಯದಲ್ಲಿನ ದ್ವಾರ ಬಾಗಿಲು ಅಗೆದು ಧ್ವಂಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ancient-temple-wreck-in-devaghat-by-treasure-hunters
ದೇವಘಾಟದ ಪ್ರಾಚೀನ ದೇಗುಲ ಧ್ವಂಸ

ದೇವಘಾಟದ ಅಮೃತೇಶ್ವರ ದೇವಾಲಯದ ಪಕ್ಕ ಇರುವ ಗಣೇಶ ದೇವಾಲಯದ ಹೆಬ್ಬಾಗಿಲಿನ ಮುಂದೆ ಅಳವಾದ ಗುಂಡಿ ತೋಡಿ ನಿಧಿಗಾಗಿ ಶೋಧಿಸಿದ್ದಾರೆ. ಜನ ಸಂಚಾರ ವಿರಳ ಇರುವ ಈ ದೇಗುಲದಲ್ಲಿ ಈ ಘಟನೆ ಗುರುವಾರ ರಾತ್ರಿ ನಡೆದಿರುವ ಶಂಕೆಯಿದೆ.

ಶುಕ್ರವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ್ ಕೊಳ್ಳಾ ಎಂಬುವರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೇಗುಲವನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ತುಂಗಭದ್ರಾ ನದಿ ಸಮೀಪದಲ್ಲಿ ಇರುವ ಈ ಸ್ಥಳವನ್ನು ದೇವಘಾಟ ಎನ್ನಲಾಗುತ್ತಿದೆ. ಇದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವತೆಗಳ ಸ್ನಾನದ ಘಟ್ಟವಾಗಿತ್ತು ಎಂದು ನಂಬಲಾಗುತ್ತಿದೆ. ರಾಮಾಯಣದ ಕಾಲದಲ್ಲಿನ ಕಿಷ್ಕಿಂಧೆ, ಪಂಪಾಸರೋವರದ ಸಾಲಿನಲ್ಲಿ ಈ ದೇವಘಾಟದ ಉಲ್ಲೇಖವಿದೆ ಎಂದು ಹೇಳಲಾಗಿದೆ.

ಓದಿ: 2021 Rewind : ರಾಜ್ಯ ಹೈಕೋರ್ಟ್​ನೊಳಗೆ 2021ರಲ್ಲಾದ ಮಹತ್ವದ ಬದಲಾವಣೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.