ETV Bharat / state

ನನ್ನನ್ನು ಸಂಪರ್ಕಿಸಲು ಅಮಿತ್ ಶಾ ಹಲವು ಬಾರಿ ಪ್ರಯತ್ನಿಸಿದರು, ಬಿಜೆಪಿಯನ್ನು ನಾನೇ ದೂರ ಇಟ್ಟೆ: ಜನಾರ್ದನ ರೆಡ್ಡಿ

ವಿಧಾಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕೆಆರ್​​ಪಿ ಪಕ್ಷದ ಏಕೈಕ ಶಾಸಕ ಜಿ. ಜನಾರ್ದನ ರೆಡ್ಡಿ ಬಿಜೆಪಿ ನೆಲ ಕಚ್ಚಲು ತಮ್ಮ ಪಕ್ಷ ಕಾರಣವೆಂದು ಹೇಳಿದ್ದಾರೆ.

MLA G Janardhana Reddy inaugurated the self-reflection meeting of KRPP workers.
ಕಾರ್ಯಕರ್ತರ ಆತ್ಮಾವಲೋಕನ ಸಭೆಯನ್ನು ಶಾಸಕ ಜಿ ಜನಾರ್ದನರೆಡ್ಡಿ ಉದ್ಘಾಟಿಸಿದರು.
author img

By

Published : May 21, 2023, 7:58 PM IST

ಗಂಗಾವತಿ (ಕೊಪ್ಪಳ): ಚುನಾವಣೆ ಮುನ್ನ ನನ್ನ ಸಂಪರ್ಕಿಸಲು ಕೇಂದ್ರದ ಗೃಹ ಸಚಿವ ಅಮಿತ್​ ಶಾ ಹಲವು ಬಾರಿ ಯತ್ನಿಸಿದ್ದರು. ಆದರೆ ನಾನೇ ಉದ್ದೇಶಪೂರ್ವಕವಾಗಿ ಬಿಜೆಪಿಯನ್ನು ದೂರ ಇಟ್ಟಿದ್ದೆ ಎಂದು ಗಂಗಾವತಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್​​ಪಿಪಿ) ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ. ಬಳ್ಳಾರಿ ಮತ ಕ್ಷೇತ್ರದಿಂದ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧಿಸಿ ಸೋತ ಹಿನ್ನೆಲೆ ನಗರದ ಕನಕಗಿರಿ ರಸ್ತೆಯ ಕೆಆರ್​ಪಿಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.

ನನ್ನನ್ನು ಪಕ್ಷಕ್ಕೆ ವಾಪಸ್​ ಬರಮಾಡಿಕೊಳ್ಳಿ ಎಂದು ನಾನು ಬಿಜೆಪಿ ಪಕ್ಷದ ಮುಖಂಡರ ಮನೆ ಬಾಗಿಲಿಗೆ ಎಂದಿಗೂ ಹೋಗಿರಲಿಲ್ಲ. ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಬಳಿಯಂತೂ ನಾನು ಮೊದಲೇ ಹೋಗಿರಲಿಲ್ಲ. ಎಷ್ಟೋ ಬಾರಿ ಅಮಿತ್ ಶಾ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ನಾನೇ ಅವರಿಗೆ ಉದ್ದೇಶ ಪೂರ್ವಕ ಸಿಕ್ಕಿಲ್ಲ. ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟಿದ್ದೇನು ಎಂದು ರೆಡ್ಡಿ ತಿಳಿಸಿದರು.

ಬಿಜೆಪಿಯ ನೂರು ಶಾಸಕರಿಗೆ ರೆಡ್ಡಿ ಸಮ.. ಬಿಜೆಪಿ ಪಕ್ಷದ ಪಕ್ಷದ ಅಷ್ಟು ಶಾಸಕರಿಗೆ ನಾನೊಬ್ಬನೆ ಸಮ. ವಿಧಾನಸೌಧದಲ್ಲಿ ನೂರು ಜನ ಶಾಸಕರು ಮಾಡುವ ಕೆಲಸವನ್ನು ನಾನೊಬ್ಬನೆ ಮಾಡಿ ತೋರಿಸುತ್ತೇನೆ. ನೂರು ಜನ ಶಾಸಕರಿಗೆ ಈ ಗಾಲಿ ಜನಾರ್ದನರೆಡ್ಡಿ ಒಬ್ಬನೇ ಸಮ ಎಂದು ಜನ ಆಡಿಕೊಳ್ಳುವ ರೀತಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದ್ರು.

ಬಳ್ಳಾರಿ ಹಾಗೂ ಗಂಗಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿ ನಾನು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ. ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಮಾಡಲಾದ ಕೆಲಸಗಳನ್ನು ನಾನು ನನ್ನ ಕ್ಷೇತ್ರದಲ್ಲಿ ಮಾಡಿ ತೋರಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ನೆಲಕಚ್ಚಲು ನಾನು ಕಾರಣ.. ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ನೆಲಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣವಾಗಿದೆ. ನಮ್ಮ ಪಕ್ಷದಿಂದ ನಾನೊಬ್ಬನೇ ಗೆದ್ದಿರಬಹುದು. ಆದರೆ ಬಿಜೆಪಿಯ ಹದಿನೈದು-ಇಪ್ಪತ್ತು ಸ್ಥಾನಗಳನ್ನು ಕಸಿದುಕೊಂಡಿದ್ದೇವೆ. ಬಿಜೆಪಿಯ ಸ್ಥಾನಗಳನ್ನು ಕಸಿದ ಪರಿಣಾಮ ಅದು ಪರೋಕ್ಷವಾಗಿ ಕಾಂಗ್ರೆಸ್​​ಗೆ ಲಾಭವಾಗಿದೆ. ಬಳ್ಳಾರಿ ಕ್ಷೇತ್ರದಲ್ಲಿ ಲಕ್ಷ್ಮೀ ಅರುಣಾ ಎರಡನೇ ಸ್ಥಾನದಲ್ಲಿ ಬಂದಿದ್ದಾರೆ. ಕೇವಲ ನೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜನರ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರೆಡ್ಡಿ ಹೇಳಿದರು.

ನನ್ನ ಅಣ್ಣ-ತಮ್ಮಂದಿರು ಹೇಡಿಗಳು.. ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಾನು ಬೆಳೆಸಿದವರು ಇಂದು ಹೇಡಿಗಳಾಗಿ ಮನೆಯಲ್ಲಿ ಕೂರುವ ಸ್ಥಿತಿ ಬಂದಿದೆ. ನನ್ನ ಅಣ್ಣ-ತಮ್ಮಂದಿರು, ಆಪ್ತರು-ಸ್ನೇಹಿತರು ಹೀಗೆ ಎಲ್ಲರನ್ನು ಜನ ಮನೆಯಲ್ಲಿ ಕೂರಿಸಿದ್ದಾರೆ. ನಾನೊಬ್ಬನೇ ಇಂದು ವಿಧಾನಸೌಧಕ್ಕೆ ಹೋಗುತ್ತಿದ್ದೇನೆ. ಈ ರೆಡ್ಡಿ ಏನೆಂಬುದು ಮುಂದಿನ ದಿನಗಳಲ್ಲಿ ಕೇವಲ ಗಂಗಾವತಿ ಮಾತ್ರವಲ್ಲ, ರಾಜ್ಯದ ಜನರಿಗೆ ತೋರಿಸಿಕೊಡುತ್ತೇನೆ. ತನ್ನನ್ನು ಮೆಟ್ಟಿಲಾಗಿ ಬಳಸಿಕೊಂಡುವರು ಇಂದು ಸೋತ ಸುಣ್ಣವಾಗಿದ್ದಾರೆ ಎಂದು ಪರೋಕ್ಷವಾಗಿ ಶ್ರೀರಾಮುಲು, ಸೋಮಶೇಖರರೆಡ್ಡಿ, ಕರುಣಾಕರ ರೆಡ್ಡಿ ಇತರರ ವಿರುದ್ಧ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಗೆ ಟಾರ್ಗೆಟ್..​ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ 2023ರ ವಿಧಾನಸಭಾ ಚುನಾವಣೆ ಕೇವಲ ಪ್ರಾಯೋಗಿಕ ಪರೀಕ್ಷೆ ಇದ್ದಂತೆ. ನಮ್ಮ ಪಕ್ಷದ ಮುಂದಿರುವ ಗುರಿ 2024ರ ಲೋಕಸಭೆ ಹಾಗೂ 2028ರ ಕರ್ನಾಟಕದ ವಿಧಾನ ಸಭೆ ಚುನಾವಣೆ ಎನ್ನುವುದು ಪಕ್ಷದ ಎಲ್ಲ ನಾಯಕರರಿಗೆ ಗಮನದಲ್ಲಿರಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಎದುರಾಗಲಿರುವ ಜಿಲ್ಲಾ, ತಾ.ಪಂ, ಬಳ್ಳಾರಿ ಮಹಾನಗರ ಪಾಲಿಕೆ, ಗಂಗಾವತಿ ನಗರಸಭೆಯಲ್ಲಿ ಕೆಆರ್ಪಿಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಗುರಿ ಇರಿಸಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಎಲ್ಲಾ ವಾರ್ಡ್​ಗಳಲ್ಲಿ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಬಳ್ಳಾರಿಯಲ್ಲಿ ಆದ ಸೋಲಿನಿಂದ ಕಾರ್ಯಕರ್ತರು ಎದೆಗುಂದದೆ ಸಂಘಟನೆಗೆ ಮುನ್ನುಗ್ಗಿ ಎಂದು ರೆಡ್ಡಿ ಸಲಹೆ ನೀಡಿದರು.

ಇದನ್ನೂಓದಿ: ಕಮಲ ಬಿಟ್ಟು, ಕಾಂಗ್ರೆಸ್ ಕೈ ಹಿಡಿದ ಲಿಂಗಾಯತರು: ಶಾಸಕರ ಗೆಲುವಿನ ಸಂಖ್ಯೆ ದುಪ್ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.