ಕೊಪ್ಪಳ: ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಹಾಗೂ ಸೈಕಲ್ ಥಾನ್ ನಡೆಯಿತು.
ನಗರದ ಪ್ರವಾಸಿ ಮಂದಿರದ ಬಳಿಯಿಂದ ಪ್ರಾರಂಭವಾದ ಸೈಕಲ್ಥಾನ್ಗೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದ್ರು.
ನಗರದ ಐಬಿಯಿಂದ ಪ್ರಾರಂಭವಾದ ವಾಕ್ಥಾನ್ ಅಶೋಕ ಸರ್ಕಲ್ ಮೂಲಕ ತಾಲೂಕು ಪಂಚಾಯತ್ ಮಾರ್ಗವಾಗಿ ಸಾಲಾರ್‌ಜಂಗ್ ರಸ್ತೆ, ಗಡಿಯಾರ ಕಂಬದ ಸರ್ಕಲ್, ಸಿಂಪಿ ಲಿಂಗಣ್ಣ ರಸ್ತೆಯ ಮಾರ್ಗವಾಗಿ ಸಾಗಿ ಪ್ರವಾಸಿ ಮಂದಿರಕ್ಕೆ ತಲುಪಿ ಮುಕ್ತಾಯವಾಯಿತು.
ಇನ್ನು, ಸೈಕಲ್‌ಥಾನ್ ಅಶೋಕ ವೃತ್ತದಿಂದ, ಸಾಲಾರ್‌ಜಂಗ್ ರಸ್ತೆ, ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಪುನಃ ಪ್ರವಾಸಿ ಮಂದಿರ ತಲುಪಿ ಮುಕ್ತಾಯಗೊಂಡಿತು. ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.