ETV Bharat / state

ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್  'ಪಂಚ್​' ಜಾಗೃತಿ - ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ ಹೇಳಿಕೆ

ಏಡ್ಸ್ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ವಿವಿಧ ಸಂಘ, ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಾಗೃತಿ ಜಾಥಾ ನಡೆಯಿತು.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್
author img

By

Published : Dec 6, 2019, 4:13 AM IST

ಕೊಪ್ಪಳ/ಗಂಗಾವತಿ : ಏಡ್ಸ್ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ವಿವಿಧ ಸಂಘ, ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಾಗೃತಿ ಜಾಥಾ ನಡೆಯಿತು.

ಈ ವೇಳೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಭಾಗವಹಿಸಿ ಮಾತನಾಡಿದರು. ಇಂದಿನ ಶಿಕ್ಷಣದಲ್ಲಿ ಪ್ರೌಢಶಾಲೆ ಹಂತದಿಂದಲೇ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಲೈಗಿಕತೆ, ಕಾಂಡೋಮ್​ ಬಳಕೆ ಹಾಗೂ ಏಡ್ಸ್​ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರಿಂದ ಭವಿಷ್ಯದಲ್ಲಿ ಏಡ್ಸ್​ ತಡೆಗಟ್ಟಲು ನೆರವಾಗಬೇಕು ಎಂದು ನೆರೆದಿದ್ದ ಜನರನ್ನು ನಗಿಸುತ್ತಲೇ ಪ್ರಾಣೇಶ್ ತಮ್ಮ ಹಾಸ್ಯದಾಟಿಯ ಭಾಷಣದಲ್ಲಿ ಜನರಿಗೆ ಏಡ್ಸ್ ಕುರಿತಾಗಿ ಸಂದೇಶವನ್ನು ನೀಡಿದರು.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್

ಈ ವೇಳೆ ಜಿಲ್ಲಾಧಿಕಾರಿ ಸುನಿಲ್ ಕುಮಾರ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನ್ಯಾಯಾಧೀಶರಾದ ಆರ್.ಎಂ. ನಧಾಪ್, ಅನಿತಾ, ಗಾಯತ್ರಿ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Intro:ಏಡ್ಸ್ ಮಾನವ ಜನಾಂಗವನ್ನು ಕಾಡುತ್ತಿರುವ ಮಹಾಮಾರಿ. ಏಡ್ಸ್ ಎಂಬ ಸೋಂಕು ತಗುಲಿದ ಬಳಿಕ ಮಾನವನಿಗೆ ಮರಣವೇ ಕೊನೆಯ ಪರಿಹಾರ. 'ಮುಂಜಾಗ್ರತೆಯ ಮಹಾಮದ್ದು' ಎಂಬ ಅರಿವಿನ ಆಂದೋಲನ ಈಗೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಹೊತ್ತಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ವಿವಿಧ ಸಂಘ, ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದ ಪ್ರಾಣೇಶ ಏಡ್ಸ್ ಬಗ್ಗೆ ನೀಡಿದ ಸಂದೇಶವೇನು.......? ಅವರ ಮಾತಿನಿಂದಲೇ ಕೇಳಿ.
Body:ಡೈಲಾಗ್ ಕಿಂಗ್ ಪಂಚಿಂಗ್ ಪ್ರಾಣೇಶ ಬೀಚಿ ಏಡ್ಸ್ ಬಗ್ಗೆ ಹೇಳಿದ್ದೇನು...?
ಗಂಗಾವತಿ:
ಏಡ್ಸ್ ಮಾನವ ಜನಾಂಗವನ್ನು ಕಾಡುತ್ತಿರುವ ಮಹಾಮಾರಿ. ಏಡ್ಸ್ ಎಂಬ ಸೋಂಕು ತಗುಲಿದ ಬಳಿಕ ಮಾನವನಿಗೆ ಮರಣವೇ ಕೊನೆಯ ಪರಿಹಾರ. 'ಮುಂಜಾಗ್ರತೆಯ ಮಹಾಮದ್ದು' ಎಂಬ ಅರಿವಿನ ಆಂದೋಲನ ಈಗೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಹೊತ್ತಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ವಿವಿಧ ಸಂಘ, ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದ ಪ್ರಾಣೇಶ ಏಡ್ಸ್ ಬಗ್ಗೆ ನೀಡಿದ ಸಂದೇಶವೇನು.......? ಅವರ ಮಾತಿನಿಂದಲೇ ಕೇಳಿ.
ವಾ.ಓ.1: ಹೇಳಿಕೇಳಿ ಅಧುನಿಕ ಬೀಚಿ ಎಂದು ಕರೆಯಿಸಿಕೊಳ್ಳುವ ಪಂಚಿಂಗ್ ಪ್ರಾಣೇಶ ಕಾರ್ಯಕ್ರಮದಲ್ಲಿದ್ದರೆ ಅಲ್ಲಿ ಡೈಲಾಗ್ಗಳ ಸುರಿಮಳೆಯಾಗುತ್ತದೆ. ಸಭಿಕರ ಚಪ್ಪಾಳೆ, ಕಿವಿಗಚ್ಚಿಕ್ಕುವ ಕರತಾಡನ, ಅತಿಥಿ ಸೇರಿದಂತೆ ಗಂಟುಮುಖ ಇಟ್ಟುಕೊಂಡವರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಚತುರ ಪ್ರಾಣೇಶ.
ಪ್ರಾಣೇಶ ಇದ್ದರೆ ಸಾಕು ಅಲ್ಲಿ ನಗೆಯಾಡಲು ವಿಷಯಗಳೇ ಬೇಕೆಂದೇನು ಇಲ್ಲ. ನಾವು ನೀವು ಮಾತನಾಡಿದಂತೆ ಸಹಜವಾಗಿ ಅವರು ಪಂಚಿಂಗ್ ಕೊಟ್ಟು ಮಾತನಾಡುವ ಶೈಲಿಯೇ ನಮ್ಮನ್ನು ನಗೆಗಡಲಲ್ಲಿ ತೇಲಾಡಿಸುತ್ತದೆ. ಇಷ್ಟಕ್ಕೂ ನಗರದಲ್ಲಿ ನಡೆದ ಸಭೆಯಲ್ಲಿ ಏಡ್ಸ್ ಬಗ್ಗೆ ಮಾತನಾಡಿದ ಪ್ರಾಣೇಶ ಕೊನೆಗೆ ಅವರು ಕೊಟ್ಟ ಸಂದೇಶ ಏನು ಎಂಬುವುದನ್ನು ನೋಡಿ.
ವಾ.ಓ.2: ಬೆಳಗಾದರೆ ಸಾಕು ಮತ್ತೆ ರಾತ್ರಿಯಾಗೋವರೆಗೂ ಸದಾ ಜನರ ಸೇವೆ, ಕರ್ತವ್ಯ ಪಾಲನೆ, ಕಾಯ್ದೆ ಕಾನೂನು ಎಂದು ಜಂಜಾಟದಲ್ಲಿರುವ ಜಿಲ್ಲಾಧಿಕಾರಿ ಸುನಿಲ್ ಕುಮಾರ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನ್ಯಾಯಾಧೀಶರಾದ ಆರ್.ಎಂ. ನಧಾಪ್, ಅನಿತಾ, ಗಾಯತ್ರಿ, ಡಿವೈಎಸ್ಪಿ ಚಂದ್ರಶೇಖರ ಮೊದಲಾದವರು ಪ್ರಾಣೇಶರ ಪಂಚಿಂಗ್ ಡೈಲಾಗ್ಗೆ ಫಿದಾ ಆದರು. ಮನಸಾರೆ ನಗುವ ಮೂಲಕ ಅಧಿಕಾರಿಗಳು ರಾಜಕಾರಣಿಗಳು, ಕರ್ತವ್ಯದ ಒತ್ತಡದಿಂದ ಕೊಂಚ ರಿಲಾಕ್ಸ್ ಆಗಿದ್ದು ಮಾತ್ರ ಸುಳ್ಳಲ್ಲ.

Conclusion:ವಾ.ಓ.2: ಬೆಳಗಾದರೆ ಸಾಕು ಮತ್ತೆ ರಾತ್ರಿಯಾಗೋವರೆಗೂ ಸದಾ ಜನರ ಸೇವೆ, ಕರ್ತವ್ಯ ಪಾಲನೆ, ಕಾಯ್ದೆ ಕಾನೂನು ಎಂದು ಜಂಜಾಟದಲ್ಲಿರುವ ಜಿಲ್ಲಾಧಿಕಾರಿ ಸುನಿಲ್ ಕುಮಾರ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನ್ಯಾಯಾಧೀಶರಾದ ಆರ್.ಎಂ. ನಧಾಪ್, ಅನಿತಾ, ಗಾಯತ್ರಿ, ಡಿವೈಎಸ್ಪಿ ಚಂದ್ರಶೇಖರ ಮೊದಲಾದವರು ಪ್ರಾಣೇಶರ ಪಂಚಿಂಗ್ ಡೈಲಾಗ್ಗೆ ಫಿದಾ ಆದರು. ಮನಸಾರೆ ನಗುವ ಮೂಲಕ ಅಧಿಕಾರಿಗಳು ರಾಜಕಾರಣಿಗಳು, ಕರ್ತವ್ಯದ ಒತ್ತಡದಿಂದ ಕೊಂಚ ರಿಲಾಕ್ಸ್ ಆಗಿದ್ದು ಮಾತ್ರ ಸುಳ್ಳಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.