ETV Bharat / state

ಮಳೆ ಅಬ್ಬರ: ಕೊಚ್ಚಿ ಹೋದ ಮುದೇನೂರು-ದೋಟಿಹಾಳ ತಾತ್ಕಾಲಿಕ ಸೇತುವೆ

author img

By

Published : Oct 1, 2020, 2:03 PM IST

ಭಾರೀ ಮಳೆಗೆ ಮುದೇನೂರು-ದೋಟಿಹಾಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮತ್ತೆ ಕೊಚ್ಚಿ ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಬನ್ನಟ್ಟಿ ಗ್ರಾಮದ ಬಳಿ ನಡೆದಿದೆ.

Again road destroyed, Again road destroyed in Bannaatti Village, Bannaatti road destroyed, Bannaatti road destroyed news, Bannaatti road destroyed latest news, ಮತ್ತೆ ಕೊಚ್ಚಿ ಹೋದ ರಸ್ತೆ, ಬನ್ನಟ್ಟಿಯಲ್ಲಿ ಮತ್ತೆ ಕೊಚ್ಚಿ ಹೋದ ರಸ್ತೆ, ಬನ್ನಟ್ಟಿಯಲ್ಲಿ ಮತ್ತೆ ಕೊಚ್ಚಿ ಹೋದ ರಸ್ತೆ ಸುದ್ದಿ,
ಮತ್ತೆ ಕೊಚ್ಚಿ ಹೋದ ಮುದೇನೂರು-ದೋಟಿಹಾಳ ತಾತ್ಕಾಲಿಕ ಸೇತುವೆ

ಕುಷ್ಟಗಿ (ಕೊಪ್ಪಳ): ಕಳೆದ ರಾತ್ರಿ ಧಾರಾಕಾರ ಮಳೆಯಿಂದ ಕುಷ್ಟಗಿ ತಾಲೂಕಿನ ಮುದೇನೂರು-ದೋಟಿಹಾಳ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಪುನಃ ಕೊಚ್ಚಿ ಹೋಗಿದೆ.

ದೋಟಿಹಾಳ-ಮುದೇನೂರು ಬನ್ನಟ್ಟಿ ಬಳಿ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಮುದೇನೂರು-ದೋಟಿಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಭಾರಿ ಮಳೆಯಾಗಿ ತಾತ್ಕಾಲಿಕ ಸೇತುವೆ ನೀರುಪಾಲಾಗಿದೆ.

ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿರುವುದರಿಂದ ಮುದೇನೂರು-ದೋಟಿಹಾಳ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮುದೇನೂರು, ಕಂದಗಲ್, ಹಿರೇ ಓತಗೇರಿ ಮೂಲಕ ಇಲಕಲ್​, ತೆಗ್ಗಿಹಾಳ, ಟೆಂಗುಂಟಿ ಮೂಲಕ ಕುಷ್ಟಗಿಗೆ ಸುತ್ತುವರಿದು ಹೋಗುವುದು ಅನಿವಾರ್ಯವಾಗಿದೆ.

ಅಂದಾಜು 5 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿದೆ. ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮಳೆಯ ನೆಪವಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೇತುವೆ ಪೂರ್ಣಗೊಳಿಸಲು ಪ್ರಯತ್ನಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.