ಕುಷ್ಟಗಿ : ಕುಷ್ಟಗಿ ಹಾಗೂ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ಹೊತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿದ್ದಾರೆ.
![ಚಿನ್ನಾಭರಣ ವಶ](https://etvbharatimages.akamaized.net/etvbharat/prod-images/kn-kst-01-24-kushtagi-police-station-kac10028_24022023150832_2402f_1677231512_45.jpg)
ಬೀಗ ಹಾಕಿದ ಮನೆಗಳ ಕಳ್ಳತನ ಮಾಡುವುದರಲ್ಲಿ ಸ್ಪೆಷಲಿಸ್ಟ್ ಆಗಿದ್ದ ಐನಾತಿ ಕಳ್ಳರು ಮನೆಯಲ್ಲಿ ಚಿನ್ನಾಭರಣ, ಹಣ ಸಿಗಲಿ ಬಿಡಲಿ ಬಾಗಲು ಬೀಗ ಮುರಿದು ಒಳನುಗ್ಗುತ್ತಿದ್ದರು. ಕುಷ್ಟಗಿ ಪೊಲೀಸ್ ಠಾಣೆಯ ಹಿಂಭಾಗ ಮಾಜಿ ಸೈನಿಕ, ಮಡಿವಾಳ ಸಮಾಜದ ಅಧ್ಯಕ್ಷ ಸುಭಾಷ್ ಮಡಿವಾಳರ ಅವರ ಮನೆ, ಚಂದ್ರಶೇಖರ್ ಲೇಔಟ್‌ನ ನರ್ಸ್ ಮನೆ, ಕಾರ್ಗಿಲ್ ವೃತ್ತದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮನೆ ಹಾಗೂ ವಣಗೇರಾ ಸೇರಿದಂತೆ ತಾವರಗೇರಾ ಪಟ್ಟಣದಲ್ಲಿ ಮನೆ ಕಳವು ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಪ್ರಶ್ನಿಸಿದ್ದ ಅರ್ಜಿ: ಸರ್ಕಾರಕ್ಕೆ ನೋಟಿಸ್ ಕೊಟ್ಟ ಹೈಕೋರ್ಟ್
ಚಾಲಾಕಿ ಕಳ್ಳರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನವರು. ಸಿದ್ದರಾಮ್ ಪೂಜಾರಿ, ಗಂಗಾರಾಮ್ ಚೌವ್ಹಾಣ್, ಗುಲಾಬ್ ಗಂಗಾರಾಮ್ ಚೌವ್ಹಾಣ್ ಕಳವು ಮಾಡಿ ಆಳಂದ ಹೀರಾಚಂದ ಪ್ರಕಾಶ್ ಪಾಟೀಲ್ಗೆ ಮಾರಾಟ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಮೂವರಿಗೆ ಗಂಭೀರ ಗಾಯ
ಜಿಲ್ಲಾ ಪೊಲೀಸ್ ಅಧೀಕ್ಷಕ ಯಶೋಧಾ ವಂಟಿಗೋಡಿ, ಡಿವೈಎಸ್ಪಿ ಗಂಗಾವತಿ ಶೇಖರಪ್ಪ ಹೆಚ್ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ತಾವರಗೇರಾ ಠಾಣೆಯ ಪಿಎಸೈ ತಿಮ್ಮಣ್ಣ, ಕುಷ್ಟಗಿ ಠಾಣೆಯ ಪಿಎಸ್ಐ ಮೌನೇಶ ರಾಠೋಡ್, ಹನುಮಸಾಗರ ಪಿಎಸ್ಐ ಸುನೀಲ್ ಹೆಚ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ವಿಜಯಪುರ: ಇಬ್ಬರು ಕೊಲೆ ಆರೋಪಿಗಳಿಗೆ ದಂಡಸಹಿತ ಜೀವಾವಧಿ ಶಿಕ್ಷೆ