ಕೊಪ್ಪಳ: ಸ್ಕೂಟಿ ಹಾಗೂ ಕ್ರಷರ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣ ಬಳಿಯ ರವಿ ನಗರದಲ್ಲಿ ನಡೆದಿದೆ.
![accident-between-scooty-and-crusher-in-koppala](https://etvbharatimages.akamaized.net/etvbharat/prod-images/12184166_thumb.jpg)
ಮೃತ ಸ್ಕೂಟಿ ಸವಾರನನ್ನು ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದ ನಿವಾಸಿ ಅಮರೇಗೌಡ (45) ಎಂದು ಗುರುತಿಸಲಾಗಿದೆ. ಕ್ರಷರ್ ರಾಮದುರ್ಗ ಮೂಲದ್ದು ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಕ್ರಷರ್ನಲ್ಲಿ ಎಂಟು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅವರಲ್ಲಿ ಗಾಯಗೊಂಡ ಕೆಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರಟಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.