ಕೊಪ್ಪಳ: ಗಣೇಶ ಮೂರ್ತಿ ನಿಮಜ್ಜನಕ್ಕೆ ಮೆರವಣಿಗೆ ಮೂಲಕ ತೆರಳುತ್ತಿದ್ದಾಗ ಮಸೀದಿಯಿಂದ ಆಜಾನ್ ಕೇಳಿ ಬಂದಿದ್ದರಿಂದ, ಮೆರವಣಿಗೆ ಹಾಗೂ ವಾದ್ಯಗಳ ಸದ್ದನ್ನು ಕೆಲಕಾಲ ನಿಲ್ಲಿಸಿ ಭಾವೈಕ್ಯೆತೆ ಮೆರೆದ ಪ್ರಸಂಗ ನಗರದಲ್ಲಿ ಕಂಡುಬಂತು.
ಗಣೇಶ ಪ್ರತಿಷ್ಠಾಪನೆಯ ಐದನೇ ದಿನವಾದ ಶುಕ್ರವಾರ ಕೆಲ ಗಣೇಶ ಮೂರ್ತಿಗಳ ನಿಮಜ್ಜನ ನಡೆಯಿತು. ಜವಾಹರ ರಸ್ತೆಯ ಮೂಲಕ ನಿಮಜ್ಜನಕ್ಕೆ ಭರ್ಜರಿಯಾಗಿ ಮೆರವಣಿಗೆ ಮೂಲಕ ಸಾಗುತ್ತಿರುವಾಗ ಹಾದಿಯಲ್ಲಿನ ಮಸೀದಿಯಿಂದ ಆಜಾನ್ ಮೊಳಗಿತು.
ಈ ಸಂದರ್ಭದಲ್ಲಿ ಗಣೇಶ ಮೆರವಣಿಗೆಯನ್ನು ಹಾಗೂ ವಿವಿಧ ವಾದ್ಯಗಳ ಸದ್ದನ್ನು ಕೆಲಕಾಲ ನಿಲ್ಲಿಸಿ ಭಾವೈಕ್ಯತೆ ಮೆರೆಯಲಾಯಿತು.