ಗಂಗಾವತಿ : ಕೊರೊನಾ ಅನೇಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳದ ಕಾರಣ ಖಾಸಗಿ ಶಾಲೆಯ ಶಿಕ್ಷಕರ ಬದುಕು ಈಗ ಮೂರಾಬಟ್ಟೆಯಾಗಿದೆ.
ಗಂಗಾವತಿಯ ಸೇಂಟ್ ಫಾಲ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿದ್ದ ವಿಜಯಕುಮಾರ್, ಬದುಕು ಕಟ್ಟಿಕೊಳ್ಳಲು ತಳ್ಳುಬಂಡಿಯಲ್ಲಿ ತರಕಾರಿಗಳನ್ನು ಮನೆ-ಮನೆಗೆ ಒಯ್ದು ಮಾರಾಟ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸೇಂಟ್ ಫಾಲ್ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ, ಕೊರೊನಾ ಕಾರಣದಿಂದ ಆಡಳಿತ ಮಂಡಳಿ ವೇತನ ನೀಡಿಲ್ಲ. ಹೀಗಾಗಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಶಿಕ್ಷಕ ವಿಜಯಕುಮಾರ್, ತನ್ನ ಸಹೋದ್ಯೋಗಿ ಶಿಕ್ಷಕರು, ಶಾಲಾ ಮಕ್ಕಳು, ಪಾಲಕರು ಅಭಿಮಾನದಿಂದ ನನ್ನ ಬಳಿ ತರಕಾರಿ ಖರೀದಿಸುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಇದು ನನ್ನ ಜೀವನ ನಿರ್ವಹಣೆಗೆ ನೆರವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.