ಕುಷ್ಟಗಿ: ಹೆತ್ತಾಕೆಗೆ ಬೇಡವಾದ ನವಜಾತ ಶಿಶು ಚರಂಡಿಯಲ್ಲಿ ಎಸೆದಿರುವ ಘಟನೆ ತಾವರಗೇರಾ ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ಪಟ್ಟಣ ಸಹಕಾರ ಬ್ಯಾಂಕ್ ಬಳಿ ಘಟನೆ ನಡೆದಿದೆ. ಇಲ್ಲಿನ ಚರಂಡಿಯಲ್ಲಿ ಬೆಳ್ಳಂ ಬೆಳಗ್ಗೆ ನವಜಾತ ಶಿಶುವಿನ ಕಳೆಬರ ಪತ್ತೆಯಾಗಿದೆ.
ಚರಂಡಿಯಲ್ಲಿ ಮೃತ ನವಜಾತ ಶಿಶು ಹೊಕ್ಕಳು ಬಳ್ಳಿ ಸಮೇತ ತೇಲುತ್ತಿರುವುದು ಕಂಡು ಬಂದಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಹಾಗೂ ಪುರಸಭೆಯವರಿಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶು ನಾಲ್ಕೈದು ತಿಂಗಳ ಶಿಶುವಾಗಿದ್ದು, ಅವಧಿ ಪೂರ್ವವೇ ಹೆರಿಗೆ ಮಾಡಿಸಿ ಚರಂಡಿಯಲ್ಲಿ ಎಸೆಯಲಾಗಿದೆ.
ಸ್ಥಳಕ್ಕೆ ತಾವರಗೇರಾ ಪಿಎಸೈ ವೈಶಾಲಿ ಝಳಕಿ, ಎಎಸೈ ಮಲ್ಲಪ್ಪ ವಜ್ರದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ನವಜಾತ ಶಿಶುವಿನ ಕಳೆಬರವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ತಾವರಗೇರಾ ಪಟ್ಟಣ ಪಂಚಾಯತಿ ಸಿಬ್ಬಂದಿ ಅಂತ್ಯಸಂಸ್ಕಾರ ನೆರವೇರಿಸಿದರು.
ಓದಿ : ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು ಸಿಸಿಟಿವಿಯಲ್ಲಿ ಸೆರೆಯಾಯಿತು ಭಯಾನಕ ದೃಶ್ಯ..!