ಕುಷ್ಟಗಿ(ಕೊಪ್ಪಳ): ತರಬೇತಿ ಮುಗಿಸಿ ಬಂದ ಅಧಿಕಾರಿ, ಸ್ವ ಇಚ್ಛೆಯಿಂದ ಹೋಮ್ ಕ್ವಾರಂಟೈನ್ಗೆ ಒಳಗಾಗಿ ಮಾದರಿಯಾಗಿದ್ದಾರೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 18ನೇ ವಾರ್ಡ್ ವಿಠಲಾಪುರದ ವಿರೇಶಗೌಡ ಪೊಲೀಸ್ ಪಾಟೀಲ್, ಭಾರತ ಸರ್ಕಾರದ ಸೇವಾ ಸ್ಪರ್ಧಾತ್ಮಕ (ಅರಣ್ಯ) ಪರೀಕ್ಷೆಯಲ್ಲಿ ಪಾಸಾಗಿ, ತರಬೇತಿಗಾಗಿ ಡೆಹರಾಡೂನ್ಗೆ ತೆರಳಿದ್ದರು.
ಒಂದು ವಾರದ ಹಿಂದೆ ತಾವರಗೇರಾಕ್ಕೆ ಬಂದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ವಿಠಲಾಪುರದ ಹೊರವಲಯದ ತಮ್ಮ ಸ್ವಂತ ಮನೆಯಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಅಲ್ಲ ಇವರು ಅಸಿಸ್ಟೆಂಟ್ ಕಂಜರ್ವೆಟರ್ ಆಫ್ ಫಾರೆಸ್ಟ್ ಹುದ್ದೆಗೆ ಚಾಮರಾಜನಗರಕ್ಕೆ ನಿಯೋಜನೆ ಗೊಂಡಿದ್ದಾರೆ. ತಮ್ಮನ್ನು ತಾವೇ ಕ್ವಾರಂಟೈನ್ಗೆ ಒಳಪಡಿಸಿಕೊಂಡಿದ್ದು ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.