ಕುಷ್ಟಗಿ (ಕೊಪ್ಪಳ): ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆ ಕುಸಿದು ಕುಟುಂಬ ಪಾರಾದ ಘಟನೆ ತಾಲೂಕಿನ ತೆಗ್ಗಿಹಾಳದಲ್ಲಿ ನಡೆದಿದೆ.
ಧಾರಾಕಾರ ಮಳೆಯಿಂದ ಗುರುವಾರ ಬೆಳಗಿನ ಜಾವ ಗ್ರಾಮದ ಪರಸಪ್ಪ ಗ್ವಾಡೀ ಅವರ ಮನೆಯ ಕೋಣೆಯೊಂದರ ಛತ್ತು ಸಂಪೂರ್ಣ ಕುಸಿದಿದೆ. ಈ ವೇಳೆ ಪರಸಪ್ಪನ ಪತ್ನಿ, ಇಬ್ಬರು ಮಕ್ಕಳು, ಇಬ್ಬರು ಮೊಮ್ಮಕ್ಕಳು ಕುಸಿದ ಭಾಗದ ಮುಂದಿನ ಕೊಠಡಿಯಲ್ಲಿ ಮಲಗಿದ್ದರು. ಅದೃಷ್ಟಾವಷಾತ್ ಮನೆ ಕುಸಿತದಿಂದ ಇಡೀ ಕುಟುಂಬ ಪಾರಾಗಿದ್ದು ಸಂತ್ರಸ್ತರಾಗಿದ್ದಾರೆ.
ಮನೆ ಕುಸಿತಕ್ಕೆ ಮನೆಯಲ್ಲಿರುವ ಪಾತ್ರೆ, ಬಟ್ಟೆ, ದವಸ ಧಾನ್ಯ ಮಣ್ಣಿನ ಅಡಿಯಲ್ಲಿ ಸಿಲುಕಿದೆ. ಸದರಿ ಘಟನೆ ಹಿನ್ನೆಲೆಯಲ್ಲಿ ಸಂಭಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.