ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ ರೈತನೊಬ್ಬ ಜೇನು ಹುಳುಗಳನ್ನು ಮುಖದ ಮೇಲೆ ಗಡ್ಡದ ರೀತಿಯಲ್ಲಿ ಮುತ್ತಿಸಿಕೊಂಡು ನೋಡುಗರ ಮೈ ಜುಮ್ಮೆನಿಸಿದ್ದಾನೆ.
ಏಳು ಕೋಟೇಶ ಕೋಮಲಾಪುರ ಎಂಬ ರೈತ ಜೇನು ಬಿಡಿಸುವಾಗ ರಾಣಿಜೇನು ಹುಳುವಿನ ಮೂಲಕ ಜೇನುಹುಳುಗಳನ್ನು ಸೆಳೆದು ಮುಖದ ಮೇಲೆ ಗಡ್ಡದ ರೀತಿಯಲ್ಲಿ ಮುತ್ತಿಸಿಕೊಂಡಿದ್ದಾರೆ. ಕೃಷಿಕರಾಗಿರುವ ಇವರು ಜೇನು ಸಾಕಾಣಿಕೆಯನ್ನು ಸಹ ಮಾಡುತ್ತಿದ್ದಾರೆ. ಕೆಲವೊಮ್ಮೆ ಜೇನು ಹುಳುಗಳನ್ನು ಹೀಗೆ ಮೈಮೇಲೆ ಮುತ್ತಿಸಿಕೊಳ್ಳುವ ಮೂಲಕ ಜೇನು ಹುಳುಗಳೊಂದಿಗೆ ಆಟವಾಡುತ್ತಾರೆ.
ದಾಖಲೆಗಾಗಿ ಕೆಲವರು ಮುಖದ ಮೇಲೆ ಜೇನುಹುಳುಗಳನ್ನು ಮುತ್ತಿಸಿಕೊಳ್ಳುತ್ತಾರೆ. ಆದರೆ, ಏಳು ಕೋಟೇಶ್ ಮಾತ್ರ ಈ ಜೇನು ಹುಳುಗಳ ಬಗೆಗಿನ ಕುತೂಹಲದಿಂದ ಮುಖದ ಮೇಲೆ ಮೆತ್ತಿಸಿಕೊಳ್ಳುತ್ತೇನೆ ಅಲ್ಲದೆ ಅವುಗಳೊಂದಿಗೆ ಆಟವಾಡುತ್ತೇನೆ ಎಂದು ತಿಳಿಸಿದ್ದಾರೆ.