ETV Bharat / state

ಬೇಸಿಗೆ ಜಳಕ್ಕೆ ಬೆಂದ ಪಕ್ಷಿಗಳ ಪಾಲಿಗೆ ಇವರು 'ನೀರುಸಾಬ್'..

ಬೇಸಿಗೆ ವೇಳೆ ಎಲ್ಲೆಡೆ ನೀರಿನ ಅಭಾವ ಹೆಚ್ಚಾಗುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳ ಅಲೆದಾಟ ಹೇಳತೀರದು. ಹೀಗಾಗಿ ಪ್ರತಿಯೊಬ್ಬರೂ ಕೂಡ ಒಂದಿಷ್ಟು ನೀರು, ಆಹಾರ ನೀಡಿದಲ್ಲಿ ಒಳಿತು ಎಂಬುದು ಕೊಪ್ಪಳ ಜಿಲ್ಲೆಯ ವ್ಯಕ್ತಿಯೋರ್ವನ ಆಶಯ.

author img

By

Published : Mar 22, 2019, 8:01 PM IST

ಪಕ್ಷಿಗಳಿಗೆ ನೀರು-ಆಹಾರ ಪೂರೈಕೆ

ಕೊಪ್ಪಳ: ಬೇಸಿಗೆ ಬಂತೆಂದರೆ ಸಾಕು ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ತಾನು ಕೆಲಸ ಮಾಡುವ ಪ್ರದೇಶದಲ್ಲಿ ಪಕ್ಷಿಗಳಿಗೆ ನೀರು ಹಾಗೂ ಕಾಳಿನ ವ್ಯವಸ್ಥೆ ಮಾಡುವ ಮೂಲಕ ಹಸಿವು ನೀರಡಿಕೆಯನ್ನು ಇಂಗಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದಾನೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

ಪಕ್ಷಿಗಳಿಗೆ ನೀರು-ಆಹಾರ ಪೂರೈಕೆ

ಇತ್ತೀಚಿನ ರಣ ಬಿಸಿಲು ಎಂಥವರನ್ನಾದರೂ ಕಂಗೆಡಿಸುತ್ತದೆ. ನೀರಿಗಾಗಿ ಮನುಷ್ಯರೇ ಬಾಯಾರಿಕೆಯಿಂದ ಬಳಲುತ್ತಾರೆ.ಜೀವಜಲವಿಲ್ಲದೇ, ಪಕ್ಷಿಗಳು ಬಾಯಾರಿಕೆ ಹಾಗೂ ಹಸಿವು ನೀಗಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಗಳಲ್ಲಿ ನೀರು, ಕಾಳಿನ ವ್ಯವಸ್ಥೆ ಮಾಡುವ ಮೂಲಕ ಈ ನೌಕರ ಮತ್ತೊಬ್ಬರಿಗೆ ಮಾದರಿಯಾಗಿದ್ದಾನೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಚಾಲಕನಾಗಿರುವ ಸುಲ್ತಾನ್ ಸಾಬ್ ಎಂಬುವರು ಪಕ್ಷಿಗಳಿಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಕಳೆದ 9 ವರ್ಷಗಳಿಂದ ಅವರು ಪಕ್ಷಿಗಳಿಗಾಗಿ ಕುಡಿಯುವ ನೀರು, ಅವುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಸುಲ್ತಾನ್ ಸಾಬ್ ಜಿಲ್ಲಾಡಳಿತ ಭವನದಲ್ಲಿರುವ ಮರದ ರೆಂಬೆ-ಕೊಂಬೆಗಳಿಗೆ ಸುಮಾರು 250ಕ್ಕೂ ಹೆಚ್ಚು ಪಾಟ್​ಗಳನ್ನು ಕಟ್ಟಿದ್ದಾರೆ. ಅಲ್ಲದೇ ನಿತ್ಯವೂ ಅವುಗಳಲ್ಲಿ ನೀರು ತುಂಬಿಸಿ, ಆಹಾರ (ಕಾಳು, ಧಾನ್ಯ) ಹಾಕುವ ಮೂಲಕ ಪಕ್ಷಿಗಳ ಮೇಲೆ ವಿಶೇಷ ಕಾಳಜಿ ತೋರುತ್ತಿದ್ದಾರೆ.

driver
ಚಾಲಕ ಸುಲ್ತಾನ್ ಸಾಬ್

ತಮ್ಮ ಕೆಲಸದ ಬಿಡುವಿನ ಅವಧಿಯಲ್ಲಿ ಮತ್ತು ಮುಂಜಾನೆ ವೇಳೆಯಲ್ಲಿ ಬಂದು ಪಾಟ್​ಗಳಿಗೆ ನಿತ್ಯವೂ ನೀರು ಹಾಗೂ ಕಾಳುಗಳನ್ನು ಹಾಕುತ್ತಾರೆ. ಸುಲ್ತಾನ್ ಸಾಬ್ ಅವರ ಈ ಕಾಳಜಿಯಿಂದಾಗಿ ಜಿಲ್ಲಾಡಳಿ ಭವನದ ಆವರಣದಲ್ಲಿ ನಾನಾ ಬಗೆಯ ಪಕ್ಷಿಗಳು ಬಂದು ಆಹಾರ ತಿಂದು, ನೀರು ಕುಡಿಯುತ್ತವೆ.

tree
ಪಕ್ಷಿಗಳಿಗೆ ನೀರು-ಆಹಾರ ಪೂರೈಕೆ

ಸ್ವಂತ ಖರ್ಚಿನಲ್ಲಿಯೇ ಅವರು ಕಳೆದ 9 ವರ್ಷಗಳಿಂದ ಪಕ್ಷಿಗಳಿಗಾಗಿ ಮಾನವೀಯತೆಯ ಕೆಲಸ ಮಾಡುತ್ತಿದ್ದಾರೆ. ನಾವು ಮನುಷ್ಯರು. ಹಸಿವು ಬಾಯಾರಿಕೆಯಾದರೆ ಯಾರನ್ನಾದೂ‌ ಕೇಳುತ್ತೇವೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳು ಯಾರನ್ನು ಕೇಳಬೇಕು? ಅದರಲ್ಲೂ ಈ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರದ ಕೊರತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಮನೆಯ ಮುಂದೆ, ಮಾಳಿಗೆ ಮೇಲೆ ಒಂದಿಷ್ಟು ಕಾಳು, ನೀರನ್ನು ಇಟ್ಟರೆ ಒಳ್ಳೆಯದು ಎಂದು ಮನವಿ ಮಾಡ್ತಾರೆ ಸುಲ್ತಾನ್ ಸಾಬ್.

Intro:

Body:ಕೊಪ್ಪಳ:- ಹಸಿವು ತೃಷೆಯಾದರೆ ಮನುಷ್ಯರು ಯಾರನ್ನಾದರೂ ಕೇಳಿ ಹಸಿವು ನೀರಡಿಕೆಯನ್ನು ಇಂಗಿಸಿಕೊಳ್ಳಬಹುದು. ಆದರೆ, ಮೂಕ ಪ್ರಾಣಿಪಕ್ಷಿಗಳು ಪಡುವ ಯಾತನೆ ಆ ದೇವರಿಗೆ ಪ್ರೀತಿ ಎಂಬಂತಿರುತ್ತದೆ. ಈಗ ಸುಡು ಬಿಸಿಲಿಗೆ ಬಾಯಾರಿಕೆಯಿಂದ ಪ್ರಾಣಿ ಪಕ್ಷಿಗಳು ಬಳಲುತ್ತಿದ್ದು ಜೀವಜಲಕ್ಕಾಗಿ ಪರದಾಡುತ್ತವೆ. ಬೇಸಿಗೆಯ ಈ ಸಂದರ್ಭದಲ್ಲಿ ಹಕ್ಕಿ ಪಕ್ಷಿಗಳ ಈ ಯಾತನೆ ನೀಗಿಸುವ ನಿಟ್ಟಿನಲ್ಲಿ ಇಲ್ಲೊಬ್ಬರು ಸದಾ ಮಿಡಿಯುತ್ತಿದ್ದು ಅವರು ಕೆಲಸ‌ ಮಾಡುವ ಪ್ರದೇಶದಲ್ಲಿ ಹಕ್ಕಿ ಪಕ್ಷಿಗಳಿಗೆ ನೀರು, ಹಾಗೂ ಕಾಳಿನ ವ್ಯವಸ್ಥೆ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ...
ಹೌದು..., ಈಗ ಬೇಸಿಗೆ ಎಲ್ಲರನ್ನು ಬೆಂಡು‌‌ಮಾಡುತ್ತಿದೆ. ಹಸಿವಿನಿಂತ ಹೆಚ್ಚಾಗಿ ಜೀವಜಲದ ದಾಹ ಹೆಚ್ಚು. ಮನುಷ್ಯರು ಈ ಜೀವಜಲದ ದಾಹವನ್ನು ಹೇಗೋ ನೀಗಿಸಿಕೊಳ್ತಾರೆ. ಆದರೆ, ಪ್ರಾಣಿಪಕ್ಷಿಗಳ ಪಾಡು ನೆನೆಸಿಕೊಂಡರೇನೆ ಮನಕಲಕುತ್ತದೆ. ಪಕ್ಷಿಗಳು, ಹಕ್ಕಿಗಳ ಬಾಯಾರಿಕೆ ಹಾಗೂ ಹಸಿವು ನೀಗಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಗಳಲ್ಲಿ ಹಕ್ಕಿ ಪಕ್ಷಿಗಳಿಗಾಗಿ ನೀರು, ಕಾಳಿನ ವ್ಯವಸ್ಥೆ ಮಾಡುವ ಮೂಲಕ ಈ ನೌಕರರ ಮತ್ತೊಬ್ಬರಿಗೆ ಮಾದರಿಯಾಗಿದ್ದಾನೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಚಾಲಕನಾಗಿರುವ ಸುಲ್ತಾನ್ ಸಾಬ್ ಎಂಬುವವರು ಹಕ್ಕಿಪಕ್ಷಿಗಳಿಗಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ವಿಶೇಷ ಕಾಳಜಿ ಮಾಡುತ್ತಿದ್ದಾರೆ. ಕಳೆದ ೯ ವರ್ಷಗಳಿಂದ ಅವರು ಹಕ್ಕಿಪಕ್ಷಿಗಳಿಗಾಗಿ ಕುಡಿಯುವ ನೀರು, ಅವುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ಮರದ ರೆಂಬೆ ಕೊಂಬೆಗಳಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ಪಾಟ್ ಗಳನ್ನು ಕಟ್ಟಿದ್ದಾರೆ. ಅಲ್ಲದೆ ನಿತ್ಯವೂ ಅವುಗಳಲ್ಲಿ ನೀರು ತುಂಬಿಸಿ, ಅಹಾರ (ಕಾಳುಕಡಿ) ಹಾಕುವ ಮೂಲಕ ಹಕ್ಕಿ ಪಕ್ಷಿಗಳಿವೆ ವಿಶೇಷ ಕಾಳಜಿ ಮಾಡುತ್ತಿದ್ದಾರೆ. ತಮ್ಮ ಕೆಲಸದ ಬಿಡುವಿನ ಅವಧಿಯಲ್ಲಿ ಮತ್ತು ಬೆಳಗ್ಗೆ ಬೇಗನೆ ಬಂದು ಪಾಟ್ ಹಳಿಗೆ ನಿತ್ಯವೂ ನೀರು ಹಾಗೂ ಕಾಳನ್ನು ಹಾಕುತ್ತಾರೆ. ಸುಲ್ತಾನ್ಸಾಬ್ ಅವರ ಈ ಕಾಳಜಿಯಿಂದಾಗಿ ಜಿಲ್ಲಾಡಳಿ ಭವನದ ಆವರಣದಲ್ಲಿ ನಾನಾ ಬಗೆಯ ಹಕ್ಕಿ ಪಕ್ಷಿಗಳು ಬಂದು ಆಹಾರ ತಿಂದು, ನೀರು ಕುಡಿದು ಆನಂದವಾಗಿರುತ್ತವೆ. ಸ್ವಂತ ಖರ್ಚಿನಲ್ಲಿಯೇ ಅವರು ಕಳೆದ ೯ ವರ್ಷಗಳಿಂದ ಹಕ್ಕಿಪಕ್ಷಿಗಳಿಗಾಗಿ ಮಾನವೀಯತೆಯ ಕೆಲಸ ಮಾಡುತ್ತಿದ್ದಾರೆ. ನಾವು ಮನುಷ್ಯರು. ಹಸಿವು ಬಾಯಾರಿಕೆಯಾದರೆ ಯಾರನ್ನಾದೂ‌ ಕೇಳುತ್ತೇವೆ. ಆದರೆ, ಮೂಕ ಪ್ರಾಣಿ ಪಕ್ಷಿಗಳು ಯಾರನ್ನು ಕೇಳಬೇಕು? ಅದರಲ್ಲೂ ಈ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಅನ್ನಾಹಾರದ ಕೊರತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ‌ ಮನೆಯ ಮುಂದೆ, ಮಾಳಿಗೆ ಮೇಲೆ ಹಕ್ಕಿ‌ಪಕ್ಷಿಗಳಿಗಾಗಿ ಒಂದಿಷ್ಟು ಕಾಳುಕಡಿ, ನೀರನ್ನು ಇಟ್ಟರೆ ಒಳ್ಳೆಯದು ಎಂದು ಮನವಿ ಮಾಡ್ತಾರೆ ಸುಲ್ತಾನಸಾಬ್ ಅವರು. ಒಟ್ಟಾರೆಯಾಗಿ ಪ್ರಾಣಿ ಪಕ್ಷಿಗಳಿಗಾಗಿ ಒಂದು ಸಣ್ಣ ಕಾಳಜಿ ತೋರಿಸುವ ಮೂಲಕ ಮೂಕಪ್ರಾಣಿಗಳ, ಪಕ್ಷಿಗಳ ಅವ್ಯಕ್ತ ವೇದನೆಗೆ ನಮ್ಮ ಮನಸುಗಳು ಮಿಡಿಯಬೇಕಿದೆ ಎಂಬ ಸಂದೇಶ ಸಾರುವಂತಿದೆ ಸುಲ್ತಾನ್ಸಾಬ್ ಅವರ ಆ ಕಾರ್ಯ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.