ETV Bharat / state

ಕೊಪ್ಪಳದ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಗೆ ವಿಧ್ಯುಕ್ತ ಚಾಲನೆ - ಖಾಸಗಿ ಕೋವಿಡ್ ಆಸ್ಪತ್ರೆಗೆ ವಿಧ್ಯುಕ್ತ ಚಾಲನೆ

ಖಾಸಗಿ ಕೋವಿಡ್ ಆಸ್ಪತ್ರೆ ಆರಂಭಕ್ಕೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಆಡಳಿತ ಮಂಡಳಿ ಮುಂದಾಗಿದ್ದು, ಬುಧವಾರ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬರಲಿದೆ. ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆ ಅಸ್ತಿತ್ವಕ್ಕೆ ಬಂದಂತಾಗಲಿದೆ.

ಖಾಸಗಿ ಕೋವಿಡ್ ಆಸ್ಪತ್ರೆಗೆ ವಿಧ್ಯುಕ್ತ ಚಾಲನೆ
ಖಾಸಗಿ ಕೋವಿಡ್ ಆಸ್ಪತ್ರೆಗೆ ವಿಧ್ಯುಕ್ತ ಚಾಲನೆ
author img

By

Published : Aug 4, 2020, 10:25 PM IST

ಗಂಗಾವತಿ: ಕೊರೊನಾ ಸೋಂಕು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಜಿಲ್ಲಾಡಳಿತ ಕೈಗೊಂಡ ನಿರ್ಧಾರಕ್ಕೆ ಬೆಂಬಲಾರ್ಥವಾಗಿ ನಗರದಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆ ಆರಂಭಕ್ಕೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಆಡಳಿತ ಮಂಡಳಿ ಮುಂದಾಗಿದೆ.

ಪತ್ರಿಕಾ ಪ್ರಕಟಣೆ
ಪತ್ರಿಕಾ ಪ್ರಕಟಣೆ

ಬುಧವಾರ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆ ಅಸ್ತಿತ್ವಕ್ಕೆ ಬಂದಂತಾಗಲಿದೆ. ಇಲ್ಲಿನ ಗುಂಡಮ್ಮ ಕ್ಯಾಂಪಿನಲ್ಲಿರುವ ಭಾಗೀರಥಿ ಆಸ್ಪತ್ರೆಯನ್ನು ಬಾಡಿಗೆ ಪಡೆದುಕೊಂಡಿರುವ ಖಾಸಗಿ ವೈದ್ಯಕೀಯ ಸೇವಾ ಸಂಸ್ಥೆಗಳು ಐಎಂಎ ನೇತೃತ್ವದಲ್ಲಿ ಮೊದಲ ಹಂತವಾಗಿ 30 ಬೆಡ್​​ಗಳ ಆಸ್ಪತ್ರೆಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಸಿದ್ಧತೆ ನಡೆಸಿವೆ.

ಪತ್ರಿಕಾ ಪ್ರಕಟಣೆ
ಪತ್ರಿಕಾ ಪ್ರಕಟಣೆ

ಈ ಬಗ್ಗೆ ಮಾಹಿತಿ ನೀಡಿರುವ ಐಎಂಎ ಸಂಘಟನೆಯ ಕಾರ್ಯದರ್ಶಿ ಡಾ. ಬಸವರಾಜ ಸಿಂಗನಾಳ, ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ನಾವು ಎಂದಿಗೂ ಹಿಂದೇಟು ಹಾಕಿಲ್ಲ. ಆದರೆ ಕೆಲ ತಾಂತ್ರಿಕ ಕಾರಣಗಳಿಗೆ ಸಮಯದ ಅವಕಾಶ ಕೇಳಿದ್ದೇವೆ. ಆದರೆ ಇಷ್ಟರಲ್ಲಿಯೇ ಅಧಿಕಾರಿಗಳು ಆಸ್ಪತ್ರೆಗಳಿಗೆ ನೋಟಿಸ್​ ನೀಡಿ ಕೆಲವನ್ನು ಲಾಕ್ ಮಾಡಿಸಿದ್ದಾರೆ. ಇದು ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗಿತ್ತು. ನಾವು ಜನರಿಗೆ ಸೇವೆ ನೀಡಲು ಸದಾ ಸಿದ್ಧರಿದ್ದೇವೆ. ಹೀಗಾಗಿ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಮೊದಲ ಹಂತದಲ್ಲಿ ಆಸ್ಪತ್ರೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.