ETV Bharat / state

ಒಂದು ನಿಮಿಷದಲ್ಲಿ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ ಬರೆದ 999 ಮಕ್ಕಳು

author img

By

Published : Jan 23, 2023, 7:38 PM IST

ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವರ್ಲ್ಡ್​ ಬುಕ್ ಆಫ್ ರೆಕಾರ್ಡ್​ ಸ್ಪರ್ಧೆ ಆಯೋಜನೆ - ಒಂದು ನಿಮಿಷದಲ್ಲಿ ಪಜಲ್ ಬಿಡಿಸುವ ಸವಾಲು.

ವರ್ಲ್ಡ್​ ಬುಕ್ ಆಫ್ ರೆಕಾರ್ಡ್ ಬರೆದ 999 ಮಕ್ಕಳು

ಗಂಗಾವತಿ (ಕೊಪ್ಪಳ): ಪಿರಾಮಿಡ್ ಮಾದರಿಯಲ್ಲಿ ರಚಿತವಾಗಿರುವ ಪಿರಾಂಮಿಕ್ಸ್ ಕ್ಯೂಬ್​ನ ನಾನಾ ಬಣ್ಣಗಳನ್ನು ಬದಲಿಸಿ ಕೇವಲ ಒಂದು ನಿಮಿಷದಲ್ಲಿ ಮತ್ತೆ ಒಂದೇ ಬಣ್ಣಕ್ಕೆ ತರುವ ಪಜಲ್​ ​ಅನ್ನು ಬಿಡಿಸುವ ಮೂಲಕ 999 ಮಕ್ಕಳು ಏಕಕಾಲಕ್ಕೆ ವರ್ಲ್ಡ್​ ಬುಕ್ ಆಫ್ ರೆಕಾರ್ಡ್​ಗೆ ಭಾಜನರಾದರು. ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಈ ವರ್ಲ್ಡ್​ ಬುಕ್ ಆಫ್ ರೆಕಾರ್ಡ್​ ಸ್ಪರ್ಧೆಯಲ್ಲಿ ಸಂಸ್ಥೆಯ ಆಯೋಜಕರು ಮಕ್ಕಳಿಗೆ ಕೇವಲ ಒಂದು ನಿಮಿಷದಲ್ಲಿ ಪಜಲ್​ ಬಿಡಿಸುವ ಸವಾಲು ನೀಡಿದ್ದರು.

ಪಿರಾಮಿಡ್ ಕ್ಯೂಬ್ ಸವಾಲು ಬಿಡಿಸಿ ವಿಶ್ವ ದಾಖಲೆ: ಶಾಲೆಯ ಐದನೇ ತರಗತಿಯಿಂದ ಹತ್ತನೇ ತರಗತಿವರೆಗಿನ 999 ಮಕ್ಕಳು ಏಕಕಾಲಕ್ಕೆ ಶಾಲೆಯ ಮೈದಾನದಲ್ಲಿ ಸೇರಿ ಕೇವಲ ಒಂದು ನಿಮಿಷಕ್ಕೂ ಮುನ್ನವೇ ಕ್ಯೂಬ್​ನಲ್ಲಿ ಚದುರಿದ್ದ ವಿವಿಧ ಬಣ್ಣಗಳನ್ನು ಬದಲಿಸಿ ಒಂದು ಮಗ್ಗುಲಲ್ಲಿ ಕೇವಲ ಒಂದೇ ಬಣ್ಣ ಬರುವ ರೀತಿಯಲ್ಲಿ ಪಿರಾಮಿಡ್ ಕ್ಯೂಬ್ ಸವಾಲು ಬಿಡಿಸಿ ವಿಶ್ವ ದಾಖಲೆ ಬರೆದರು.

13ಕ್ಕೂ ಹೆಚ್ಚು ಶಿಕ್ಷಕರ ನಿಯೋಜನೆ: ಒಂದೊಂದು ಗುಂಪಿನಲ್ಲಿ ತಲಾ 223 ಮಕ್ಕಳಂತೆ ಒಟ್ಟು ನಾಲ್ಕು ಗುಂಪಿನಲ್ಲಿ ಸೇರಿಸಿ ಪಿರಾಮಿಡ್ ಮಾದರಿಯಲ್ಲಿಯೇ ಶಾಲಾ ಮೈದಾನದಲ್ಲಿ ಕೂರಿಸಲಾಗಿತ್ತು. ಹೆಚ್ಚುವರಿ 158 ಮಕ್ಕಳನ್ನು ಮತ್ತೊಂದು ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಹೀಗೆ ವರ್ಲ್ಡ್​ ಬುಕ್ ಆಫ್ ರೆಕಾರ್ಡ್​ನಲ್ಲಿ ಭಾಗಿಯಾಗಲು ಒಟ್ಟು 1050 ಮಕ್ಕಳು ಆ ಮಕ್ಕಳ ಮೇಲೆ ನಿಗಾ ಇಡಲು ಶಾಲೆಯ 13ಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಕ್ಯೂಬ್​ನಲ್ಲಿರುವ ಬಣ್ಣಗಳನ್ನು ಚದುರಿಸಲು ಮೊದಲಿಗೆ ಸಂಘಟಕರು ಸೂಚನೆ ನೀಡಿದರು.

ವರ್ಲ್ಡ್​ ಬುಕ್ ಆಫ್ ರೆಕಾರ್ಡರ್​ನಲ್ಲಿ ದಾಖಲೆ: ಬಳಿಕ ಲೈವ್ ವಿಡಿಯೋ ಮೂಲಕ ಮಕ್ಕಳಿಗೆ ಒಂದು ನಿಮಿಷದಲ್ಲಿ ಬಣ್ಣಗಳನ್ನು ಒಗ್ಗೂಡಿಸುವ ಸವಾಲು ನೀಡಲಾಯಿತು. ಮಕ್ಕಳು ತಮ್ಮ ಕ್ರೀಯಾಶೀಲತೆ ಮೆರೆದು ಕೇವಲ 57 ಸೆಕೆಂಡ್​​​​​ಗಳಲ್ಲಿ ಗುರಿ ತಲುಪುವ ಮೂಲಕ ವರ್ಲ್ಡ್​ ಬುಕ್ ಆಫ್ ರೆಕಾರ್ಡರ್​ನಲ್ಲಿ ದಾಖಲೆ ಬರೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಕ್ಕಳು ಕೇವಲ 15-17 ಸೆಕೆಂಡ್​ಗಳಲ್ಲಿ ಸವಾಲಿನ ಗುರಿ ತಲುಪಿದರು.

ವಿಶ್ವದ 175 ದೇಶಗಳಲ್ಲಿ ವೀಕ್ಷಣೆ: ಇನ್ನು ಕೆಲ ಮಕ್ಕಳು ಹೆಚ್ಚುವರಿ ಸೆಕೆಂಡ್​ಗಳನ್ನು ತೆಗೆದುಕೊಂಡರು. ಒಟ್ಟಾರೆ ಎಲ್ಲ 999 ಮಕ್ಕಳು 57 ಸೆಕೆಂಡುಗಳಲ್ಲಿ ಗುರಿಯನ್ನು ತಲುಪುವ ಮೂಲಕ ವಿಶ್ವ ದಾಖಲೆ ಬರೆದರು. ಈ ಬಗ್ಗೆ ಘೋಷಣೆ ಮಾಡಿದ ವರ್ಲ್ಡ್​ ಬುಕ್ ಆಫ್ ರೆಕಾರ್ಡ್​ನ ಕ್ಯಾಲಿಗ್ರಾಫರ್ (ಹಸ್ತಪ್ರತಿ ತಜ್ಞ) ಹಾಗೂ ಸಂಚಾಲಕ ಡಾ. ವಿಜಯ್ ಭಾಸ್ಕರ್​ ರೆಡ್ಡಿ, ಮಕ್ಕಳ ಈ ಸಾಧನೆಯನ್ನು ವಿಶ್ವದ 175 ದೇಶಗಳಲ್ಲಿ ವೀಕ್ಷಿಸಲಾಗುತ್ತದೆ ಎಂದರು.

ವರ್ಲ್ಡ್​ ಬುಕ್ ಆಫ್ ರೆಕಾರ್ಡರ್​ನ ಭಾರತದ ಪ್ರತಿನಿಧಿ ಬಿಂಗಿ ನಾಗೇಂದ್ರಗೌಡ ಮಾತನಾಡಿ, ವಿದ್ಯಾನಿಕೇತನ ಪಬ್ಲಿಕ್ ಶಾಲೆಯ 999 ಮಕ್ಕಳು ಏಕಕಾಲಕ್ಕೆ ಒಂದು ನಿಮಿಷದಲ್ಲಿ ಪಿರಾಮಿಡ್ ಮಾದರಿಯ ಕ್ಯೂಬ್​ನ ಸವಾಲು ಬಿಡಿಸಿದ್ದಾರೆ ಎಂದು ಘೋಷಣೆ ಮಾಡಿದರು.

ಸವಾಲುಗಳನ್ನು ಸ್ವೀಕರಿಸುವ ಮನೋಭಾವನೆ ವೃದ್ಧಿ: ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಮಕ್ಕಳಲ್ಲಿ ಸಂತಸ, ಉಲ್ಲಾಸ ತುಂಬಲು ಇಂತಹ ಸ್ಪರ್ಧೆಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲಾಗುತ್ತಿದೆ. ಮಾನಸಿಕವಾಗಿ ಸಂತೋಷವಾಗಿರುವ ಮಕ್ಕಳು ಮಾತ್ರ ಏನನ್ನಾದರೂ ಸಾಧನೆ ಮಾಡಬಲ್ಲರು. ವರ್ಲ್ಡ್​ ಬುಕ್ ಆಫ್ ರೆಕಾರ್ಡರ್​ನ ಈ ಪಿರಾಮಿಡ್ ಕ್ಯೂಬ್ ಪಜಲ್​​​ನಲ್ಲಿ ಭಾಗಿಯಾದ ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ, ಭೌದ್ಧಿಕ ವಿಕಸನ ವೃದ್ಧಿಯಾಗುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವನೆ ವೃದ್ಧಿಯಾಗುತ್ತದೆ ಎಂದು ಸೂರಿಬಾಬು ವಿಶ್ವಾಸ ವ್ಯಕ್ತಪಡಿಸಿದರು.

ಓದಿ : 4 ಲಕ್ಷಕ್ಕೂ ಹೆಚ್ಚು ಜನರಿಂದ ಯೋಗ: ಗಿನ್ನಿಸ್ ದಾಖಲೆಯ ಪುಟ ಸೇರಿದ ಕರ್ನಾಟಕದ ಯೋಗಥಾನ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.