ಗಂಗಾವತಿ: ಮಣ್ಣನ್ನು ನೀರಿನಲ್ಲಿ ಬೆರೆಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಘಟಕದ ಮೇಲೆ ದಾಳಿ ಮಾಡಿ 75 ಕ್ಯೂಬಿಕ್ ಮೀಟರ್ (30 ಟ್ರ್ಯಾಕ್ಟರ್) ಪ್ರಮಾಣದ ಮರಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ತಾಲೂಕಿನ ವೆಂಕಟಗಿರಿ ಹೋಬಳಿಯ ಆರ್ಹಾಳ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಮಣ್ಣನ್ನು ತಂದು ನೀರಿನಲ್ಲಿ ಬೆರೆಸಿ ಅಸ್ವಾಭಾವಿಕವಾಗಿ ಮರಳು ತೆಗೆದು ಗ್ರಾಹಕರಿಗೆ ನೈಜ ಮರಳೆಂದು ಆರೋಪಿಗಳು ಮಾರಾಟ ಮಾಡುತ್ತಿದ್ದರಂತೆ. ಇದಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೂಪ ಮಾಹಿತಿ ನೀಡಿದ್ದಾರೆ.