ETV Bharat / state

500 ಎಕರೆ ಕಿಲ್ಲಾರಹಟ್ಟಿ ಕೆರೆಯಲ್ಲಿ 300 ಎಕರೆ ಬರೀ ಮುಳ್ಳು ಕಂಟಿ! - ಕಿಲ್ಲಾರಹಟ್ಟಿ ಕೆರೆಯಲ್ಲಿ ಮುಳ್ಳುಕಂಟಿ

ಹೂಳು ತುಂಬಿದ 500 ಎಕರೆ ವಿಸ್ತಾರದ ಕಿಲ್ಲಾರಹಟ್ಟಿ ಕೆರೆಯಲ್ಲಿ 300 ಎಕರೆ ಮುಳ್ಳುಕಂಟಿಯೇ ಇದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

500-acre Killarahatti Lake id filled with prick
500 ಎಕರೆ ಕಿಲ್ಲಾರಹಟ್ಟಿ ಕೆರೆಯಲ್ಲಿ 300 ಎಕರೆ ಮುಳ್ಳುಕಂಟಿ
author img

By

Published : Oct 24, 2020, 2:28 PM IST

ಕುಷ್ಟಗಿ(ಕೊಪ್ಪಳ): ಮಳೆಗಾಲದಲ್ಲಿ ಕೆರೆ ತುಂಬಿ ಕೋಡಿ ಬಿದ್ದರೆ ವರ್ಷದ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಕಿಲ್ಲಾರಹಟ್ಟಿ ಕೆರೆಯನ್ನವಲಂಬಿಸಿರುವ ರೈತರ ಪಾಲಿಗೆ ಹುಸಿಯಾಗಿದೆ. ಹೂಳು ತುಂಬಿದ 500 ಎಕರೆ ವಿಸ್ತಾರದ ಕೆರೆಯಲ್ಲಿ 300 ಎಕರೆ ಮುಳ್ಳುಕಂಟಿಯೇ ಇದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಕುಷ್ಟಗಿ, ಸಿಂಧನೂರು ಹಾಗು ಲಿಂಗಸುಗೂರು ಈ ತ್ರಿವಳಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಕನಕನಾಲ ಯೋಜನೆಯಲ್ಲಿ ನಿರ್ಮಾಣವಾದ ಕಿಲ್ಲಾರಹಟ್ಟಿ ಕೆರೆಯು ಕರ್ನಾಟಕ ನೀರಾವರಿ ನಿಗಮದ ಅಧೀನದಲ್ಲಿದೆ. ಈ ಕೆರೆಗೆ ಅರ್ಧ ಶತಮಾನಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. 1962ರಲ್ಲಿ ಆಗಿನ ಲೋಕೋಪಯೋಗಿ ಇಲಾಖೆ ಮಂತ್ರಿ ಹೆಚ್.ಎಂ.ಚನ್ನಬಸಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 252 ಹೆಕ್ಟೇರ್ ವಿಸ್ತೀರ್ಣದಲ್ಲಿ 15,900 ಮೀಟರ್ ಉದ್ದದ 0.225 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 189.44 ಚದರ ಮೀಟರ್ ವ್ಯಾಪ್ತಿಯಲ್ಲಿ 5,100 ಎಕರೆಗೆ ನೀರುಣಿಸುವ ಮಹತ್ವಾಕಾಂಕ್ಷೆಯ ಕೆರೆ ಇದಾಗಿದೆ. ಕೆರೆ ನಿರ್ಮಾಣದಿಂದ ಇಂದಿನವರೆಗೂ ರೈತಾಪಿ ವರ್ಗಕ್ಕೆ ಈ ಕೆರೆ ಸಮಸ್ಯೆಗಳ ಆಗರವಾಗಿದೆ.

ಕಿಲ್ಲಾರಹಟ್ಟಿ ಕೆರೆ ಸಮಸ್ಯೆ

ಈ ಕೆರೆಯಿಂದ ಕಿಲ್ಲಾರಹಟ್ಟಿ, ಆರ್ಯಭೋಗಾಪೂರ ಸೇರಿದಂತೆ ಮಾಂಪುರ, ರತ್ನಾಪುರ ಹಟ್ಟಿ, ರತ್ನಾಪುರ ಬೊಮ್ಮನಾಳ, ಸಂಕನಾಳ, ಗುಂಡ, ಹೊಗರನಾಳ, ಗುಡಿಹಾಳ, ಹತ್ತಿಗುಡ್ಡ, ಗದ್ದಡಕಿ, ಬಪ್ಪರ ಈ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ಸಕಾಲಿಕವಾಗಿ ನೀರುಣಿಸಲು ಸಾಧ್ಯವಾಗಿಲ್ಲ. ಏಕೆಂದರೆ ಕೆರೆಯಲ್ಲಿ ಹಲವು ಹರ್ಷಗಳಿಂದ ಹೂಳು ತುಂಬಿದ್ದು, ಕೆರೆ ಹಿನ್ನೀರಿನ ಪ್ರದೇಶ ಹಾಗೂ ಕೋಡಿ (ವೇಸ್ಟ್ ವೇರ್) ಪ್ರದೇಶದ ಭಾಗದಲ್ಲಿ ಮುಳ್ಳುಕಂಟಿಗಳು ಬೆಳೆದಿವೆ. 2000ನೇ ಇಸವಿಯಿಂದ ರೈತರಿಂದ ಹಲವು ಹೋರಾಟಗಳು ನಡೆದಿದ್ದು, ಯಾವುದೇ ಪ್ರಯೋಜನವಾಗಿಲ್ಲವಂತೆ.

ಕನಕನಾಲದ ಕಿಲ್ಲಾರಹಟ್ಟಿ ಕೆರೆ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆರ್ಯಭೋಗಾಪೂರ ನಾಲೆಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿ ಕನಕನಾಳ ಯೋಜನೆಗೆ ನೀರು ಹರಿಸುವ ಯೋಜನೆ ರೂಪಿಸಿದ್ದು, ಡಿಪಿಆರ್ ಕೂಡ ಸಿದ್ಧವಾಗಿ ತಾಂತ್ರಿಕ ಒಪ್ಪಿಗೆಯ ಹಂತದಲ್ಲಿಯೇ ಇದೆ. ಮಸ್ಕಿ ನಾಲೆಗೆ ನೀರು ಹರಿಸುವ ಮುಂಚಿತವಾಗಿ ಕನಕನಾಲ ಯೋಜನೆಗೆ ಹರಿಸುವ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು, ಇದನ್ನು ಪರಿಹರಿಸಲು ನೀರಾವರಿ ನಿಗಮದ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಕೆರೆಯಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಜನರ ಆಕ್ರೋಶದ ಕೂಗಿಗೆ ಹೂಳೆತ್ತುವ ಕಾರ್ಯಕ್ಕೆ ಆರಂಭದಲ್ಲಿ ಶೂರತ್ವ ಪ್ರದರ್ಶಿಸಿದ್ದ ಜನಪ್ರತಿನಿಧಿಗಳು ಇದೀಗ ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ಜನರಾಡುವ ಮಾತಾಗಿದೆ.

ಇದಕ್ಕೆ ಸ್ಪಂದಿಸಬೇಕಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮತ್ತೊಂದು ಉಪ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಹಾಗಾಗಿ ಈ ಭಾಗದ ಮತದಾರರಿಗೆ ಈ ವಿಷಯವೇ ಉಪ ಚುನಾವಣೆ ಅಸ್ತ್ರವಾಗಲಿದೆಯೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಳೆದ 6 ವರ್ಷಗಳ ಹಿಂದೆ ತುಂಬಿದ್ದ ಕರೆ ಮತ್ತೆ ಇದೀಗ ತುಂಬಿದ್ದು, ಮುಳ್ಳುಕಂಟಿ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಕೆರೆಯಲ್ಲಿ ಹೂಳು ತುಂಬಿರುವುದರಿಂದ ಕೆರೆ ಬೇಗನೆ ತುಂಬುತ್ತಿದೆ. ಹಾಗಾಗಿ ಸರ್ಕಾರ ಹೂಳೆತ್ತಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂಬುದೇ ಗ್ರಾಮಸ್ಥರ ಆಗ್ರಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.