ಕೊಪ್ಪಳ: ಜಿಲ್ಲೆಯಲ್ಲಿ ಇಂದು ಒಂದೇ ದಿನ 22 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು 11 ಜನ ಪುರುಷರು ಹಾಗೂ 11 ಜನ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದರು.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66ಕ್ಕೆ ಏರಿದೆ. ಗಂಗಾವತಿ ತಾಲೂಕಿನಲ್ಲಿ 9, ಕುಷ್ಟಗಿ ತಾಲೂಕಿನಲ್ಲಿ 3, ಕೊಪ್ಪಳ ನಗರದಲ್ಲಿ 6 ಹಾಗೂ ಯಲಬುರ್ಗಾ ತಾಲೂಕಿನಲ್ಲಿ ನಾಲ್ಕು ಜನರಿಗೆ ಇಂದು ಸೋಂಕು ದೃಢಪಟ್ಟಿದೆ.
ತಾಲೂಕಿನ ಗಬ್ಬೂರು ಗ್ರಾಮದ 25 ವರ್ಷದ ಮಹಿಳೆ, ಎರಡು ವರ್ಷದ ಹೆಣ್ಣು ಮಗು, ಹುಲಿಗಿ ಗ್ರಾಮದ 55 ವರ್ಷದ ಮಹಿಳೆ, 30 ವರ್ಷದ ಮಹಿಳೆ (ಪಿ-8057ರ ಪ್ರಾಥಮಿಕ ಸಂಪರ್ಕಿತರು), ಹೊಸಲಿಂಗಪುರ ಗ್ರಾಮದ 31 ವರ್ಷದ ಮಹಿಳೆ (ಪಿ-8056ರ ಪ್ರಾಥಮಿಕ ಸಂಪರ್ಕಿತೆ) ಹಾಗೂ ಹಿರೇಬಗನಾಳ ಗ್ರಾಮದ ಮೂವತ್ತೊಂದು ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದ 19 ವರ್ಷದ ಯುವತಿ, 18 ವರ್ಷದ ಯುವಕ, 45 ವರ್ಷದ ಪುರುಷ, ಆರು ವರ್ಷದ ಗಂಡು ಮಗು, 37 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಆಂಧ್ರ ಪ್ರದೇಶದಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. ದೆಹಲಿಯ ಟ್ರಾವೆಲ್ ಹಿಸ್ಟರಿ ಇರುವ ಕಾರಟಗಿಯ 23 ವರ್ಷದ ಮಹಿಳೆ, ಮಹಾರಾಷ್ಟ್ರದ ಟ್ರಾವೆಲ್ ಹಿಸ್ಟರಿ ಇರುವ ಗಂಗಾವತಿ ತಾಲೂಕಿನ ಅಡವಿಭಾವಿ ಗ್ರಾಮದ 47 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಮರಳಿ ಗ್ರಾಮದ 56 ವರ್ಷದ ಪುರುಷ, ಗಂಗಾವತಿ ನಗರದ 18 ವರ್ಷದ ಯುವತಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮದ 32 ವರ್ಷದ ಪುರುಷ, 40 ವರ್ಷದ ಮಹಿಳೆ ಹಾಗೂ ಚಿಕ್ಕಬನ್ನಿಗೋಳ ಗ್ರಾಮದ ಮೂರು ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕುಕನೂರು (ಯಲಬುರ್ಗಾ) ತಾಲೂಕಿನ ತಳಕಲ್ ಗ್ರಾಮದ 34 ವರ್ಷದ ಪುರುಷ, ಚಿಕೇನಕೊಪ್ಪ ಗ್ರಾಮದ 25 ವರ್ಷದ ಪುರುಷ, ಗೊರ್ಲೆಕೊಪ್ಪ ಗ್ರಾಮದ 12 ವರ್ಷದ ಬಾಲಕ ಹಾಗೂ ಯಡ್ಡೋಣಿ ಗ್ರಾಮದ 55 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಎಲ್ಲಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಎಚ್ಚರದಿಂದ ಇರಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.