ETV Bharat / state

ವಡ್ಡರಹಟ್ಟಿ ಗ್ರಾಮದಲ್ಲಿ 20ಕ್ಕೂ ಅಧಿಕ ಸೋಂಕಿತರು ಪತ್ತೆ: ಪಂಚಾಯತ್ ಇಲಾಖೆಯಿಂದ ಜಾಗೃತಿ

ಗಂಗಾವತಿ ತಾಲ್ಲೂಕಿನಲ್ಲಿಯೇ ವಡ್ಡರಹಟ್ಟಿ ಅತಿದೊಡ್ಡ ಗ್ರಾಮ ಪಂಚಾಯಿತಿ. ಇಲ್ಲಿನ ಶ್ರಮಿಕ ವರ್ಗ ಬೆಂಗಳೂರು ಸೇರಿದಂತೆ ನಾನಾ ನಗರ, ಪಟ್ಟಣ ಪ್ರದೇಶಕ್ಕೆ ಉಪಜೀವನ ಅರಿಸಿ ಗುಳೆ ಹೋಗಿದ್ದು, ಇದೀಗ ಕೆಲವರು ವಾಪಸ್​ ನಗರಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮರಳಿ ಬಂದವರಿಂದಲೋ ಅಥವಾ ಸ್ಥಳೀಯರಿಂದಲೋ ಗ್ರಾಮಕ್ಕೆ  ಕೊರೊನಾ ಕಾಲಿಟ್ಟಿದೆ.

Gangavati covid awareness program
Gangavati covid awareness program
author img

By

Published : Apr 23, 2021, 4:21 PM IST

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಒಂದರಲ್ಲಿಯೇ 20ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಗಂಗಾವತಿ ನಗರಕ್ಕೆ ಸಮೀಪದಲ್ಲಿರುವ ಹಾಗೂ ತಾಲೂಕಿನಲ್ಲಿಯೇ ವಡ್ಡರಹಟ್ಟಿ ಅತಿದೊಡ್ಡ ಗ್ರಾಮ ಪಂಚಾಯಿತಿ. ಇಲ್ಲಿನ ಶ್ರಮಿಕ ವರ್ಗ ಬೆಂಗಳೂರು ಸೇರಿದಂತೆ ನಾನಾ ನಗರ, ಪಟ್ಟಣ ಪ್ರದೇಶಕ್ಕೆ ಉಪಜೀವನ ಅರಿಸಿ ಗುಳೆ ಹೋಗಿದ್ದು, ಇದೀಗ ಕೆಲವರು ವಾಪಸ್​ ನಗರಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮರಳಿ ಬಂದವರಿಂದಲೋ ಅಥವಾ ಸ್ಥಳೀಯರಿಂದಲೋ ಗ್ರಾಮಕ್ಕೆ ಕೊರೊನಾ ಕಾಲಿಟ್ಟಿದೆ.

ಇದುವರೆಗೂ ಗ್ರಾಮದ ಉಪ ವಿಭಾಗ ಆರೋಗ್ಯ ಕೇಂದ್ರದ ಅಂಕಿ- ಅಂಶಗಳ ಪ್ರಕಾರ 20ಕ್ಕೂ ಅಧಿಕ ಕೇಸು ಪತ್ತೆಯಾಗಿವೆ. 12 ಗಂಡು, 8 ಹೆಣ್ಣು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಸದ್ಯ ಪಂಚಾಯಿತಿ ರಾಜ್ ಹಾಗೂ ಆರೋಗ್ಯ ಇಲಾಖೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಶುರುಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.