ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ಹಿನ್ನೆಲೆ, ಅವರನ್ನು ಹೂಮಳೆಯ ಮೂಲಕ ಸ್ವಾಗತಿಸಿಕೊಳ್ಳಲಾಯಿತು.
ಕಳೆದ ಭಾನುವಾರ ಈ ಇಬ್ಬರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ, ಯಲಬುರ್ಗಾ ತಾಲೂಕಿನ ತಳಕಲ್ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು. ಇಂದು ಇವರಿಬ್ಬರು ಗುಣಮುಖರಾಗಿ ವಾಪಸ್ಸಾದ ಹಿನ್ನೆಲೆ, ಪಿಎಸೈ ಚಿತ್ತರಂಜನ್ ನಾಯಕ್ ಅವರು ಹೂವಿನ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.
ಓರ್ವ ಪೊಲೀಸ್ ಸಿಪಿಐ ಕಚೇರಿಯಲ್ಲಿ, ಇನ್ನೊಬ್ಬರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಸೇವೆಯಲ್ಲಿದ್ದಾರೆ. ಸದ್ಯ ಇಬ್ಬರೂ ಕೂಡಾ ಗುಣಮುಖರಾಗಿರುವುದು ಪೊಲೀಸ್ ಸಿಬ್ಬಂದಿಯಲ್ಲಿ ಸಂತಸ ತಂದಿದೆ.