ETV Bharat / state

ಬೈಕ್ ಅಡ್ಡಗಟ್ಟಿ ಪೊಲೀಸ್ ಅಧಿಕಾರಿಗಳೆಂದು ಹಣ ವಸೂಲಿ, ಇಬ್ಬರ ಬಂಧನ

ಬೈಕ್ ಅಡ್ಡಗಟ್ಟಿ ಹಣ ವಸೂಲಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

2-arrested-for-taking-money-in-the-name-of-police-officers
ಬೈಕ್ ಅಡ್ಡಗಟ್ಟಿ ಪೊಲೀಸ್ ಅಧಿಕಾರಿಗಳೆಂದು ಹಣ ವಸೂಲಿ..ಇಬ್ಬರ ಬಂಧನ
author img

By

Published : Oct 3, 2021, 10:09 AM IST

Updated : Oct 3, 2021, 10:46 AM IST

ಕೊಪ್ಪಳ: ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು ಹಣ ವಸೂಲಿ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಕೊಪ್ಪಳ‌ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಗದಗ ಮೂಲದ ಸಂಜಯ್ ಕೊಪ್ಪದ ಹಾಗೂ ನರಗುಂದದ ಸಂಜು ಚಲವಾದಿ ಎಂದು ಗುರುತಿಸಲಾಗಿದೆ.

ಇವರು ಕಳೆದ ಆಗಸ್ಟ್ 15ರಂದು ಯಲಬುರ್ಗಾದ ಭೀಮೇಶ ಎಂಬುವವರಿಂದ ಹಣ ವಸೂಲಿ ಮಾಡಿದ್ದರು. ಭೀಮೇಶ ಬೈಕ್​ನಲ್ಲಿ ಮುನಿರಾಬಾದ್​​ಗೆ ಹೊರಟಿದ್ದಾಗ ಕೊಪ್ಪಳ ಹೊರವಲಯದಲ್ಲಿ ಬೈಕ್ ಅಡ್ಡಗಟ್ಟಿಆರೋಪಿಗಳು, ಪೊಲೀಸ್ ಅಧಿಕಾರಿಗಳೆಂದು ಬೈಕ್​ ತಪಾಸಣೆ ನಡೆಸಿದ್ದಾರೆ. ಬಳಿಕ, ಭೀಮೇಶನ ಬಳಿಕ ಇದ್ದ 1 ಸಾವಿರ ರೂಪಾಯಿ ಹಾಗೂ ಎಟಿಎಂ ಪಿನ್ ಪಡೆದು 1,500 ರೂಪಾಯಿ ಹಣ ಡ್ರಾ ಮಾಡಿದ್ದರು.

ಈ ಕುರಿತು ಭೀಮೇಶ ಕೊಪ್ಪಳ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ಕೆಲ ಠಾಣಾ ವ್ಯಾಪ್ತಿಯಲ್ಲೂ ಇಂತಹ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಗಾಂಧಿ ಜಯಂತಿಯಂದು ರಾಷ್ಟ್ರಪಿತನಿಗೆ ಅವಮಾನ: ಯುವಕನ ವಿರುದ್ಧ ದೂರು

Last Updated : Oct 3, 2021, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.