ETV Bharat / state

ಕೆಸಿವಿ ವಿರುದ್ಧ ಮಾತಾಡಿಲ್ಲ: ಉಲ್ಟಾ ಹೊಡೆದ 7 ಜನ ಉಚ್ಛಾಟಿತ ಕಾಂಗ್ರೆಸ್​ ಮುಖಂಡರು - ಕೋಲಾರದಲ್ಲಿ ಕಾಂಗ್ರೆಸ್​ ಮುಖಂಡರ ಅಮಾನತು ಸುದ್ದಿ

ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ವಿರುದ್ಧ ಮಾತನಾಡಿ ಅಮಾನತುಗೊಂಡಿದ್ದ ಕಾಂಗ್ರೆಸ್​​ ಮುಖಂಡರು ಇದೀಗ ಉಲ್ಟಾ ಹೊಡೆದಿದ್ದಾರೆ.

ಕೆಸಿವಿ ವಿರುದ್ಧ ಮಾತಾಡಿಲ್ಲ
author img

By

Published : Oct 20, 2019, 2:11 PM IST

ಕೋಲಾರ: ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ವಿರುದ್ಧ ಮಾತನಾಡಿ ಅಮಾನತುಗೊಂಡಿದ್ದ ಕಾಂಗ್ರೆಸ್​​ ಮುಖಂಡರು ಇದೀಗ ಉಲ್ಟಾ ಹೊಡೆದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಈ ಕಾಂಗ್ರೆಸ್​​ ಮುಖಂಡರು, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನ ಕೊಟ್ಟಿಲ್ಲವೆಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋಸ ಮಾಡಿದವರ ಕುರಿತು ಕ್ರಮ ಕೈಗೊಳ್ಳಬೇಕೆಂದು ಸುದ್ದಿಗೋಷ್ಟಿ ನಡೆಸಿದ್ದೇವೆಯೇ ಹೊರತು ಕಾಂಗ್ರೆಸ್ ಹೈಕಮಾಂಡ್ ಹಾಗೂ ಉಸ್ತುವಾರಿ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕೆಸಿವಿ ವಿರುದ್ಧ ಮಾತಾಡಿಲ್ಲವೆಂದು ಅಮಾನತುಗೊಂಡಿರುವ ಕಾಂಗ್ರೆಸ್​ ಮುಖಂಡರ ಸ್ಪಷ್ಟನೆ

ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಕಲೀಲ್, ಹೈಕಮಾಂಡ್ ಕುರಿತು ಮಾತನಾಡುವಾಗ ಅವರನ್ನ ತಡೆದು ಹೊರ ಕಳುಹಿಸಲಾಗಿದೆ. ಹೀಗಾಗಿ ವಾಸ್ತವಾಂಶದ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ನೀಡಲಿದ್ದು, ಹೈಕಮಾಂಡ್ ಈ ಕುರಿತು ಪರಿಶೀಲನೆ ನಡೆಸಿ ಅಮಾನತು ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಅಮಾನತುಗೊಂಡ ಕಾಂಗ್ರೆಸ್​ ಮುಖಂಡರು ತೀರ್ಮಾನಿಸಿದ್ದಾರೆ.

ಇನ್ನು, ಕೆ ಸಿ ವೇಣುಗೋಪಾಲ್​ರನ್ನ ರಾಜ್ಯ ಉಸ್ತುವಾರಿಯಿಂದ ತೆಗೆಯುವಂತೆ ಕೋಲಾರದ ಕಾಂಗ್ರೆಸ್​ ಮುಖಂಡರು ಸುದ್ದಿಗೋಷ್ಟಿ ನಡೆಸಿ ಆಗ್ರಹಿಸಿದ್ರು ಎಂಬ ಆರೋಪ ಕೇಳಿಬಂದಿದತ್ತು. ಈ‌ ಹಿನ್ನೆಲೆ ಕಾಂಗ್ರೆಸ್ ನಗರ ಅಧ್ಯಕ್ಷ ಪ್ರಸಾದ್ ಬಾಬು, ಕೆಯುಡಿಎ ಮಾಜಿ ಅಧ್ಯಕ್ಷ ಅತ್ತಾವುಲ್ಲ, ಜಯದೇವ್, ಕುಮಾರ್ ಸೇರಿದಂತೆ 7 ಜನರನ್ನ ಉಚ್ಛಾಟನೆ ಮಾಡಲಾಗಿದೆ.

Intro:ಕೋಲಾರ
ದಿನಾಂಕ - ೧೯-೧೦-೧೯
ಸ್ಲಗ್ - ಅಮಾನತು ರದ್ದುಗೊಳಿಸಿ
ಫಾರ್ಮೆಟ್ - ಎವಿಬಿ

ಆಂಕರ್: ನಿನ್ನೆ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ವಿರುದ್ದ ಮಾತನಾಡಿ ಅಮಾನತುಗೊಂಡಿದ್ದ ಕಾಂಗ್ರೆÃಸ್ ಮುಖಂಡರು ಇಂದು ಉಲ್ಟಾ ಹೊಡೆದಿದ್ದಾರೆ.

Body:ಇಂದು ಕೋಲಾರದಲ್ಲಿ ಪತ್ರಿಗೋಷ್ಟಿ ನಡೆಸಿದ ಅಮಾನತುಗೊಂಡ ಕಾಂಗ್ರೆÃಸ್ ಮುಖಂಡರು, ರಾಜ್ಯಉಸ್ತುವಾರಿಗಳಾದ ವೇಣುಗೋಪಾಲ್ ಅವರ ವಿರುದ್ದ ಯಾವುದೇ ಹೇಳಿಕೆಗಳನ್ನ ಕೊಟ್ಟಿಲ್ಲ ಎಂದು ಉಲ್ಟಾ ಹೊಡೆಸಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆÃಸ್ ವಿರುದ್ದ ಮೋಸ ಮಾಡಿದವರ ಕುರಿತು ಕ್ರಮಕೈಗೊಳ್ಳಬೇಕೆಂದು ಪತ್ರಿಕಾಗೋಷ್ಟಿ ನಡೆಸಿದ್ದೆÃವೆಯೇ ಹೊರತು ಕಾಂಗ್ರೆÃಸ್ ಹೈಕಮಾಂಡ್ ಹಾಗೂ ಉಸ್ತುವಾರಿಗಳ ವಿರುದ್ದ ಮಾತನಾಡಿದಲ್ಲ ಎಂದರು. ಇನ್ನು ನಿನ್ನೆ ಪತ್ರಿಕಾಗೋಷ್ಟಿ ನಡೆಸಿದ್ದವರಲ್ಲಿ ಮಾಜಿ ನಗರಸಭೆ ಅದ್ಯಕ್ಷರಾಗಿದ್ದ ಕಲೀಲ್ ಅವರನ್ನ ಹೊರತುಪಡಿದ್ರೆ, ಇನ್ಯಾರು ಸಹ ಹಿರಿಯರ ವಿರುದ್ದ ಮಾತನಾಡಿಲ್ಲ ಎಂದರು. ಇನ್ನು ನಿನ್ನೆ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಮಾನತು ಮಾಡುವಂತೆ ಆದೇಶ ಹೊಡರಿಸಿದ್ದು, ಅದರಂತೆ ಏಳು ಜನ ಕಾಂಗ್ರೆಸ್ ಮುಖಂಡರನ್ನ ಅಮಾನತು ಮಾಡಲಾಗಿತ್ತುConclusion:
. ಈ ಹಿನ್ನಲೆ ಮಾದ್ಯಮದವರೊಂದಿಗೆ ಮಾತನಾಡಿದ ಮುಖಂಡರು, ಪತ್ರಿಕಾಗೋಷ್ಟಿಯಲ್ಲಿ ಮಾಜಿ ನಗರಸಭೆ ಅದ್ಯಕ್ಷ ಕಲೀಲ್, ಹೈಕಮಾಂಡ್ ಕುರಿತು ಮಾತನಾಡುವಾಗ ಅವರನ್ನ ತಡೆದು ಹೊರ ಕಳುಹಿಸಲಾಗಿದೆ ಹೀಗಾಗಿ ವಾಸ್ತವಾಂಶದ ಕುರಿತು ಕೆಪಿಸಿಸಿ ಅದ್ಯಕ್ಷರಿಗೆ ಮನವಿ ನೀಡಲಿದ್ದು, ಹೈಕಮಾಂಡ್ ಇದರ ಕುರಿತು ಪರಿಶೀಲನೆ ನಡೆಸಿ ಅಮಾನತು ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಅಮಾನತುಗೊಂಡ ಕೈ ಮುಖಂಡರು ತೀರ್ಮಾನಿಸಿದ್ದಾರೆ.

ಬೈಟ್ ೧: ಪ್ರಸಾದ್ ಬಾಬು (ಬ್ಲಾಕ್ ಕಾಂಗ್ರೆÃಸ್ ಅದ್ಯಕ್ಷ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.