ಕೋಲಾರ: ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಬೆಂಬಲಿಗರಿಗೆ ನಾನು ಸಹಾಯ ಮಾಡಲು ಆಗಲಿಲ್ಲ. ಆದರೆ ಪರೋಕ್ಷವಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ನಮ್ಮ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಅಲ್ಲದೆ ಅವರು ಇದು ಕಾಂಗ್ರೆಸ್ನ ದುಡ್ಡು ಎಂದು ಹೇಳಿ ಬೆಂಬಲಿಗರಿಗೆ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಹೇಳುವ ಮೂಲಕ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾರ್ಯಕ್ರಮವೊಂದರಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ಇತ್ತೀಚೆಗೆ ಕಾಂಗ್ರೆಸ್ ಮೇಲೆ ವ್ಯಾಮೋಹ ಹೆಚ್ಚಾಗಿದೆ ಅನಿಸುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಆದ ಪಕ್ಷ ರಚನೆ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿ ಅವರ ಕೆಂಗಣ್ಣಿಗೆ ಗುರಿಯಾಗಿದ್ರು. ಇದಾದ ನಂತರ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ವತಃ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳಿದ್ರು.
ಓದಿ:ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಮರಳುವುದಿಲ್ಲ: ಭೈರತಿ ಬಸವರಾಜ್
ಈ ಎಲ್ಲಾ ಘಟನೆಗಳಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಕೆ.ಹೆಚ್.ಮುನಿಯಪ್ಪ ಅವರನ್ನ ವರ್ತೂರು ಪ್ರಕಾಶ್ ಹಾಡಿ ಹೊಗಳಿದ್ದಾರೆ. ನಮ್ಮ ಬೆಂಬಲಿಗರಿಗೆ ದುಡ್ಡು ಕೊಡುವ ಅಗತ್ಯವಿರಲಿಲ್ಲ. ವರ್ತೂರು ಪ್ರಕಾಶ್ ಪರಿಸ್ಥಿತಿ ಸರಿಯಿಲ್ಲ. ಅವರ ಕಾರ್ಯಕರ್ತರನ್ನ ಕೈ ಹಿಡಿಯಬೇಕೆಂದು ಈ ಒಂದು ಕಷ್ಟದ ಕಾಲದಲ್ಲಿ ಇದು ಕಾಂಗ್ರೆಸ್ ದುಡ್ಡು ಎಂದು ಕೆ.ಹೆಚ್.ಮುನಿಯಪ್ಪ ಸಹಾಯ ಮಾಡಿದ್ದಾರೆ ಎಂದರು.