ಕೋಲಾರ : ಜಿಲ್ಲೆಯಲ್ಲಿ ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಅವರ ಧಮ್ ಬಿರಿಯಾನಿ ಹವಾ ಮತ್ತೆ ಶುರುವಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರಿಗೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಭರ್ಜರಿ ಬಿರಿಯಾನಿ ಪಾರ್ಟಿ ಇಟ್ಟಿದ್ದಾರೆ.
ಕೋಲಾರ ಹೊರವಲಯದ ಕೋಗಿಲಹಳ್ಳಿ ಗ್ರಾಮದ ತಮ್ಮ ನಿವಾಸದ ಬಳಿ ಬಿರಿಯಾನಿ ಪಾರ್ಟಿ ಆಯೋಜಿಸಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಬಂದವರಿಗೆಂದು ಭರ್ಜರಿ ಬಿರಿಯಾನಿ ತಯಾರಾಗಿದೆ.
ಸುಮಾರು ಎರಡು ಸಾವಿರ ಜನರಿಗೆ ಬಿರಿಯಾನಿ ಊಟ ತಯಾರಾಗುತ್ತಿದೆ. 500 ಕೆಜಿ ಚಿಕನ್, 300 ಕೆಜಿ ಮಟನ್ ಬಿರಿಯಾನಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಹಲವಾರು ದಿನಗಳ ನಂತರ ಮತ್ತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ರಾಜಕೀಯದಲ್ಲಿ ಸಕ್ರಿಯರಾಗುತ್ತಿದ್ದು, ಇಂದು ಅವರ ಬಿರಿಯಾನಿ ಹವಾ ಜೋರಾಗಿದೆ.
ಇದನ್ನೂ ಓದಿ: ಜನವರಿ 4 ರಿಂದ ಬೆಂಗಳೂರು ಏರ್ಪೋರ್ಟ್ ರೈಲು ನಿಲ್ದಾಣಕ್ಕೆ ರೈಲು ಸಂಚಾರ ಆರಂಭ