ETV Bharat / state

ಬೆಂಗಳೂರು ಗಲಭೆಯಲ್ಲಿ ಭಾಗಿಯಾದವರು ಭಯೋತ್ಪಾದಕರು: ಸಂಸದ ಎಸ್.ಮುನಿಸ್ವಾಮಿ - ಸಂಸದ ಎಸ್.ಮುನಿಸ್ವಾಮಿ

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಕೃತ್ಯ ಘನಘೋರವಾದ್ದದ್ದು. ಕಾನೂನು ಕೈಗೆತ್ತಿಕೊಂಡು ಉದ್ದೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ಕೃತ್ಯವನ್ನ ಎಸಗಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

MP S. Muniswamy
ಸಂಸದ ಎಸ್.ಮುನಿಸ್ವಾಮಿ
author img

By

Published : Aug 13, 2020, 1:25 PM IST

Updated : Aug 13, 2020, 1:50 PM IST

ಕೋಲಾರ: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಘಟನೆಯಲ್ಲಿ ಭಾಗಿಯಾಗಿರುವವರು ಭಯೋತ್ಪಾದಕರು ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ

ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಕೃತ್ಯ ಘನಘೋರವಾದದ್ದು. ಇಂತಹವರು ನಮ್ಮ ಭಾರತೀಯ ಪ್ರಜೆಗಳಾಗಲು ಸಾಧ್ಯವೇ ಇಲ್ಲ. ಸೋಷಿಯಲ್ ಮೀಡಿಯಾಗಳಲ್ಲಿನ ಪೋಸ್ಟರ್​​ಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದರೊಂದಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಕಾನೂನು ಕೈಗೆತ್ತಿಕೊಂಡು ಉದ್ದೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ಕೃತ್ಯ ಎಸಗಿದ್ದಾರೆಂದು ಅಭಿಪ್ರಾಯಪಟ್ಟರು. ಘಟನೆಯಲ್ಲಿ ಭಾಗಿಯಾಗಿರುವ ಎಸ್​ಡಿಪಿಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಯಾರೇ ಆಗಿದ್ದರು ಅವರನ್ನ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಅವರು ಆಗ್ರಹಿಸಿದ್ರು.

ಉತ್ತರಪ್ರದೇಶದ ಮಾದರಿಯಲ್ಲಿ ಗಲಬೆಗಳಲ್ಲಿ ಭಾಗಿಯಾಗುವಂತಹವರು ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕೆಲಸ ಕರ್ನಾಟಕದಲ್ಲಿ ಅಗಬೇಕು. ಅಲ್ಲದೆ ಇಂತಹ ಕೃತ್ಯ ಎಸಗಿದವರಿಗೆ ಕ್ಷಮೆ ಇರಬಾರದು. ಜೊತೆಗೆ ಇಂತಹವರಿಗೆ ವಿರೋಧ ಪಕ್ಷದವರಾಗಲಿ, ಯಾರೇ ಅಗಲಿ ಬೆಂಬಲ ನೀಡಬಾರದು ಎಂದರು.

Last Updated : Aug 13, 2020, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.