ETV Bharat / state

ಕೋಲಾರ: ಕುಸಿದು ಬಿದ್ದ ಮನೆಯ ಮೇಲ್ಚಾವಣಿ, ಏಳು ಜನರಿಗೆ ಗಾಯ - ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ

The roof of a collapsed house: ಮನೆಯ ಮೇಲ್ಚಾವಣೆ ಕುಸಿದು ಬಿದ್ದಿದ್ದರಿಂದ ಏಳು ಜನರು ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ಬುಧವಾರ ರಾತ್ರಿ ನಡೆದಿದೆ.

The roof of a collapsed house
ಕೋಲಾರ: ಕುಸಿದು ಬಿದ್ದ ಮನೆಯ ಮೇಲ್ಚಾವಣಿ, ಏಳು ಜನರಿಗೆ ಗಾಯ
author img

By ETV Bharat Karnataka Team

Published : Dec 14, 2023, 1:14 PM IST

Updated : Dec 14, 2023, 1:31 PM IST

ಕೋಲಾರ: ಕುಸಿದು ಬಿದ್ದ ಮನೆಯ ಮೇಲ್ಚಾವಣಿ, ಏಳು ಜನರಿಗೆ ಗಾಯ

ಕೋಲಾರ: ಮನೆಯ ಮೇಲ್ಚಾವಣೆ ಕುಸಿದು ಬಿದ್ದ ಪರಿಣಾಮ ಏಳು ಮಂದಿ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಿನ್ನೆ (ಬುಧವಾರ) ರಾತ್ರಿ ಸಂಭವಿಸಿದೆ. ಈ ‌ದುರ್ಘಟನೆಯಲ್ಲಿ ಶ್ರೀನಿವಾಸ್, ಹೇಮಶ್ರೀ ಹಾಗೂ ಅವರ ಮಕ್ಕಳಾದ ಮೇಘನಾ, ವೈಶಾಲಿ, ಶಿವ ಮತ್ತು ಶ್ರೀನಿವಾಸ್ ಸೇರಿದಂತೆ ಅವರ ಮನೆಗೆ ಬಂದಿದ್ದ ಸಂಬಂಧಿಕರಾದ ನಾಗಮ್ಮ ಹಾಗೂ ಮುನಿವೆಂಕಟಪ್ಪ ಎಂಬುವರು ಸಹ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮೇಘನಾ ಎಂಬ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಬಾ ಹಳೆಯ ಕಟ್ಟಡ ಇದಾಗಿದ್ದು, ಮಳೆ ಬಂದರೆ ಮನೆಯ ಮೇಲ್ಚಾವಣಿಯಿಂದ ನೀರು ಸೋರಿಕೆಯಾಗುತ್ತಿತ್ತು. ಮೇಲ್ಚಾವಣಿಗೆ ತಾಡಪತ್ರಿ ಹಾಕಿ, ಮನೆಯಲ್ಲಿ ಕುಟುಂಬದ ಸದಸ್ಯರು ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಪ್ರಕರಣ, ಮಣ್ಣು ಕುಸಿದು ಕಾರ್ಮಿಕ ಸಾವು: ರೈಲ್ವೆ ಮೇಲ್ಸೇತುವೆ ಕೆಳಭಾಗದ ಅಂಡರ್ ಗ್ರೌಂಡ್ ಪೈಪ್​ಲೈನ್​ ಅಳವಡಿಸುವ ವೇಳೆಯಲ್ಲಿ ಮಣ್ಣು ಕುಸಿದು ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದಿತ್ತು. ಶಿವಮೊಗ್ಗ ತಾಲೂಕು ಮಂಡೆನಕೊಪ್ಪದ ಸತೀಶ್ ನಾಯ್ಕ ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕ.

ಶಿವಮೊಗ್ಗ ನಗರದ ನವಲೆ ರಸ್ತೆಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಅಂಡರ್ ಗ್ರೌಂಡ್ ಪೈಪ್ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿತ್ತು. ಜೆಸಿಬಿ ಮೂಲಕ ಮಣ್ಣು ತೆಗೆದು ಪೈಪ್ ಅಳವಡಿಕೆ ಮಾಡಲಾಗುತ್ತಿತ್ತು. ಪೈಪ್ ಅಳವಡಿಸಲು ಮಣ್ಣು ತೆಗೆದು ಎರಡು ಅಡಿ ಗಾತ್ರದ ಕಾಂಕ್ರಿಟ್ ಪೈಪ್​​ಗಳನ್ನು ಅಳವಡಿಸುವ ವೇಳೆಯಲ್ಲಿ ಮಣ್ಣು ಕುಸಿದಿತ್ತು. ಈ ಸಮಯದಲ್ಲಿ ಸತೀಶ್ ನಾಯ್ಕ ಮಣ್ಣಿನ ಅಡಿ ಸಿಲುಕಿದಾಗ ಆತನನ್ನು ಮೇಲಕ್ಕೆ ಎತ್ತಲು ಜೆಸಿಬಿ ಯತ್ನಿಸುವಾಗ ಜೆಸಿಬಿಯ ಬಕೆಟ್ ಸತೀಶ್ ನಾಯ್ಕನ ತಲೆಗೆ ಬಡಿದಿದೆ. ಉಸಿರಾಟ ತೊಂದರೆ ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ನಾಯ್ಕ ಮೃತಪಟ್ಟಿದ್ದರು. ಈ ಪ್ರಕರಣದ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಭ್ರೂಣ ಹತ್ಯೆ ಕೇಸ್​: ಆರೋಗ್ಯಾಧಿಕಾರಿಗಳ ತನಿಖೆ ವೇಳೆ ಹೊಸಕೋಟೆಯ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ

Last Updated : Dec 14, 2023, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.