ಕೋಲಾರ: ಸರ್ಕಾರದ ನೂತನ ಯೋಜನೆಯಾಗಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇಳೆ ಅಧಿಕಾರಿಗಳು ಸಕತ್ ಸ್ಟೆಪ್ಸ್ ಹಾಕಿ ಕುಣಿದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ನರಿನತ್ತ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮತ್ತು ಸಿಬ್ಬಂದಿ ಡ್ಯಾನ್ಸ್ ಮಾಡಿದ್ದಾರೆ.
ಬಂಗಾರಪೇಟೆಯ ತಹಶೀಲ್ದಾರ್ ದಯಾನಂದ್ ಹಾಗೂ ಅವರ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದನ್ನು ನೋಡಿ ಗ್ರಾಮದ ಕೆಲವರು ಚಪ್ಪಾಳೆ ಶಿಳ್ಳೆ ಸಹ ಹಾಕಿ ಎಂಜಾಯ್ ಮಾಡಿದ್ದು ಕಂಡು ಬಂತು.
ಇದನ್ನೂ ಓದಿ:ಮೀಸಲಾತಿ ಕುರಿತಂತೆ ಕಾನೂನು ವ್ಯಾಪ್ತಿಯಲ್ಲಿ ಸಿಎಂ ತೀರ್ಮಾನ ಮಾಡುತ್ತಾರೆ: ಸಚಿವ ಸುಧಾಕರ್