ಕೋಲಾರ: ಮನೆ ಕಂಪೌಂಡ್ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಗಲಾಟೆಯಾಗಿದ್ದು, ಇಬ್ಬರು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡಿರುವ ಘಟನೆ ತಾಲೂಕಿನ ವೇಮಗಲ್ ಹೋಬಳಿಯ ಪೆರ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯಗಳನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಗ್ರಾಮದ ಲೇಟ್ ಶ್ರೀರಾಮಪ್ಪ ಮಕ್ಕಳಾದ ಮಂಜುನಾಥ್, ಶಿವರಾಜ್ ಹಾಗೂ ಚಿಕ್ಕ ಕೆಂಪಣ್ಣ ಮಕ್ಕಳಾದ ರವಿ, ಪುಟ್ಟರಾಜು ಈ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ವೇಮಗಲ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್ ಬಾಬು ಎದುರೇ ದಾಯಾದಿಗಳು ಹೊಡೆದಾಡಿಕೊಂಡಿದ್ದಾರೆ.
ಇನ್ನು ಗಲಾಟೆಯಿಂದಾಗಿ ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ಪರ, ವಿರೋಧ ಪ್ರಕರಣ ದಾಖಲಾಗಿವೆ.