ETV Bharat / state

ಗ್ರಾ.ಪಂ ಅಧ್ಯಕ್ಷ - ಉಪಾಧ್ಯಕ್ಷರನ್ನು ಕರೆತರಲು ಬೌನ್ಸರ್​ಗಳ ರಕ್ಷಣೆ - Narasapur gram panchayat

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷರಾಗಿ ಮಾಜಿ ಸಚಿವ‌ ವರ್ತೂರು ಪ್ರಕಾಶ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಈ ಸದಸ್ಯರನ್ನು ಪಂಚಾಯಿತಿ ಕಟ್ಟಡದವರೆಗೆ ಟಿಟಿ ವಾಹನವೊಂದರಲ್ಲಿ ಬೌನ್ಸರ್​ಗಳ ರಕ್ಷಣೆಯೊಂದಿಗೆ ಕರೆ ತರಲಾಯಿತು.

protection-of-bouncers-for-gram-panchayat-president-vice-president
ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಕರೆತರಲು ಬೌನ್ಸರ್​ಗಳ ರಕ್ಷಣೆ
author img

By

Published : Feb 8, 2021, 5:46 PM IST

ಕೋಲಾರ: ಗ್ರಾಮ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಬೌನ್ಸರ್​ಗಳನ್ನು ಬಳಸಿಕೊಂಡ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಕರೆತರಲು ಬೌನ್ಸರ್​ಗಳ ರಕ್ಷಣೆ

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ - ಉಪಾಧ್ಯಕ್ಷ ಗಾದಿಗೆ ಇಂದು‌ ಆಯ್ಕೆ ಪ್ರಕ್ರಿಯೆ ನಡೆಯಿತು. ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿ ಹಿಡಿಯಲು ಪಟ್ಟು ಹಿಡಿದ ಮಾಜಿ ಸಚಿವ‌ ವರ್ತೂರು ಪ್ರಕಾಶ್ ಬೆಂಬಲಿತರನ್ನು ಕರೆತರಲು ಬೌನ್ಸರ್​ಗಳನ್ನು ಬಳಸಿಕೊಳ್ಳಲಾಗಿದೆ.

ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರ ಬಲವಿದ್ದು, ಅಂತಿಮವಾಗಿ ವರ್ತೂರು ಬಣದ ಸುಮಿತ್ರಮ್ಮ ಅಧ್ಯಕ್ಷೆಯಾಗಿ ಮತ್ತು ಉಪಾಧ್ಯಕ್ಷರಾಗಿ ಸುಮನ್ ಚಂದ್ರು ಆಯ್ಕೆಯಾಗಿದ್ದಾರೆ. ಸದಸ್ಯರನ್ನು ಪಂಚಾಯಿತಿ ಕಟ್ಟಡದವರೆಗೆ ಟಿಟಿ ವಾಹನವೊಂದರಲ್ಲಿ ಬೌನ್ಸರ್​ಗಳ ರಕ್ಷಣೆಯೊಂದಿಗೆ ಕರೆತರಲಾಯಿತು.

ಓದಿ: ಯಾರಿಗೂ ಕೊರೊನಾ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಎಂದಿಲ್ಲ.. ಡಿಸಿಎಂ ಅಶ್ವತ್ಥ್ ನಾರಾಯಣ

ವಿರುದ್ಧ ಬಣದವರು ಆ ಸಂದರ್ಭದಲ್ಲಿ ಸದಸ್ಯರನ್ನು ಸೆಳೆಯಲು ವಿಫಲ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣವಾಗಿತ್ತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಬೌನ್ಸರ್​​ಗಳನ್ನು ಸಹ ಅಲ್ಲಿಂದ ಕಳುಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.