ETV Bharat / state

ಕೋಲಾರದಲ್ಲಿ ಆಕ್ಷೇಪಾರ್ಹ ಪೋಸ್ಟರ್​: ಸಾಮಾಜಿಕ ಶಾಂತಿ ಕದಡುವ ಕೆಲಸಕ್ಕೆ ಮುಂದಾದ ಕಿಡಿಗೇಡಿಗಳು - Poster pasting near mosques about Babri Masjid at kolar

ಕೆಲ ಕಿಡಿಗೇಡಿಗಳು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರಾರ್ಥನಾ ಸ್ಥಳವೊಂದರ ಬಳಿ ಬಾಬ್ರಿ ಮಸೀದಿ‌ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿನವರನ್ನು ಕೆರಳಿಸುವ ರೀತಿ ಪೋಸ್ಟರ್​ ಅಂಟಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸೀದಿಗಳ ಬಳಿ ಪೋಸ್ಟರ್​ ಅಂಟಿಸಿರುವುದು
ಮಸೀದಿಗಳ ಬಳಿ ಪೋಸ್ಟರ್​ ಅಂಟಿಸಿರುವುದು
author img

By

Published : Dec 7, 2020, 2:03 PM IST

ಕೋಲಾರ: ಬಾಬ್ರಿ ಮಸೀದಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಈಗಾಗಲೇ ತೀರ್ಪು ನೀಡಿದೆ. ಆದರೆ ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು ಮತ್ತೆ ಒಂದು ಕೋಮಿನವರನ್ನು ಕೆರಳಿಸುವ ರೀತಿಯಲ್ಲಿ ಪೋಸ್ಟರ್​ ಅಂಟಿಸುತ್ತಿರುವ ಆರೋಪಗಳು ಕೇಳಿಬಂದಿವೆ.

ಕೋಲಾರ ನಗರದ ಬಂಬೂ ಬಜಾರ್, ಷಯಿನ್ ಷಾ ನಗರ, ಟವರ್ ಸೇರಿದಂತೆ ಹಲವೆಡೆ ಪೋಸ್ಟರ್ ಅಂಟಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಾಬ್ರಿ ಮಸೀದಿ‌ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿನ ಜನರನ್ನು ಕೆರಳಿಸುವ ರೀತಿ ಪೋಸ್ಟರ್​ಗಳನ್ನು ಅಂಟಿಸಿದ್ದಾರೆ ಎನ್ನಲಾಗ್ತಿದೆ.

ಮಂಗಳೂರು ಗಲಭೆಯ ನಂತರ ಇದೀಗ ಕೋಲಾರದಲ್ಲಿ ಶಾಂತಿ ಕದಡುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.