ETV Bharat / state

ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್​ನ ನಾಲ್ವರಿಂದ ಅರ್ಜಿ.. ಸಿದ್ದರಾಮಯ್ಯ ಭೇಟಿ ಬಳಿಕ ಗರಿಗೆದರಿದ ರಾಜಕೀಯ ಚಟುವಟಿಕೆ - ಸಿದ್ದರಾಮಯ್ಯ ಭೇಟಿ ಬಳಿಕ ಗರಿಗೆದರಿದ ರಾಜಕೀಯ ಚಟುವಟಿಕೆ

ಸಿದ್ದರಾಮಯ್ಯ ಕೋಲಾರ ಪ್ರವಾಸದ ಬಳಿಕ ರಾಜಕೀಯ ಕ್ಷಿಪ್ರ ಬೆಳವಣಿಗೆ ಆರಂಭವಾಗುವ ಮೂಲಕ ಎಲ್ಲರ ಚಿತ್ತ ಸಿದ್ದರಾಮಯ್ಯ ನಿರ್ಧಾರದತ್ತ ನೆಟ್ಟಿದೆ. ಕೋಲಾರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ, ಆಕಾಂಕ್ಷಿಗಳು 4 ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆ

author img

By

Published : Nov 21, 2022, 5:43 PM IST

ಕೋಲಾರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರಕ್ಕೆ ಬಂದು ಹೋದ ಬಳಿಕ ಇದೇ ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್​ ಆಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ಕೋಲಾರ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ.

ಸಿದ್ದರಾಮಯ್ಯ ಕೋಲಾರ ಪ್ರವಾಸದ ಬಳಿಕ ರಾಜಕೀಯ ಕ್ಷಿಪ್ರ ಬೆಳವಣಿಗೆ ಆರಂಭವಾಗುವ ಮೂಲಕ ಎಲ್ಲರ ಚಿತ್ತ ಸಿದ್ದರಾಮಯ್ಯ ನಿರ್ಧಾರದತ್ತ ಮೂಡಿದೆ. ಕೋಲಾರ ಕ್ಷೇತ್ರಕ್ಕೆ ಈಗಾಗಲೇ 4 ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿ ಆಕಾಂಕ್ಷಿಗಳು, ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ.

ಕೋಲಾರ ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡ ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಡಿ ಕೆ ಶಿವಕುಮಾರ್ ಕೃಪಕಟಾಕ್ಷೆ ಇರುವ ಮಾಲೂರು ಮೂಲಕ ಬೆಂಗಳೂರಿನ ಉದ್ಯಮಿ ಶ್ರೀನಿವಾಸ್, ಮಾಜಿ ಪರಿಷತ್ ಸದಸ್ಯ ಮನೋಹರ್ ಅರ್ಜಿ ಸಲ್ಲಿಸಿದ್ದಾರೆ.

ನಿವೃತ್ತ ಅಬಕಾರಿ ಅಧಿಕಾರಿ ಎಲ್ ಎ ಮಂಜುನಾಥ್​ ಅವರು ಮಾತನಾಡಿದರು

ಇನ್ನು, ಕೆ. ಹೆಚ್ ಮುನಿಯಪ್ಪ ಆದೇಶದಂತೆ ಇಂದು ತಮ್ಮ ಇಬ್ಬರು ಬೆಂಬಲಿಗರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆ ಮೂಲಕ ನಿವೃತ್ತ ಅಬಕಾರಿ ಅಧಿಕಾರಿ ಎಲ್ ಎ ಮಂಜುನಾಥ್ ಹಾಗೂ ಕಿಸಾನ್ ಕೇತ್‌ನ ಊರುಬಾಗಿಲು ಶ್ರೀನಿವಾಸ್ ಇಂದು ಅರ್ಜಿ ಸಲ್ಲಿಸಲಿದ್ದಾರೆ.

ಆ ಮೂಲಕ ಕೋಲಾರದಲ್ಲಿ ಎಲ್ಲವೂ ಸರಿಯಿಲ್ಲ, ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಸಾಕಷ್ಟು ಬಣಗಳಿವೆ ಅನ್ನೋದು ಈ ಮೂಲಕ ಸ್ಪಷ್ಟವಾಗುತ್ತಿದೆ. ಇನ್ನು, ಕೆ. ಹೆಚ್ ಮುನಿಯಪ್ಪ ಸೂಚನೆಯಂತೆ ಇಂದು ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಬ್ಬರು ಕಾಂಗ್ರೆಸ್​ ಆಕಾಂಕ್ಷಿ ಅಭ್ಯರ್ಥಿಗಳು ಕೆಪಿಸಿಸಿ ಕಚೇರಿಯತ್ತ ತೆರಳಿದ್ದಾರೆ.

ಓದಿ: ಕೋಲಾರದಲ್ಲಿ ಕಾಂಗ್ರೆಸ್​ ಬುಡ ಅಲುಗಾಡುತ್ತಿದೆ, ಅದಕ್ಕೆ ಸಿದ್ದರಾಮಯ್ಯರನ್ನು ಬಲಿ ಕೊಡುತ್ತಿದ್ದಾರೆ: ಸಚಿವ ಸುಧಾಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.