ಕೋಲಾರ : ಆ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮೂಲಕ ಬಯಲು ಸೀಮೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೊಸದೊಂದು ಆಶಾ ಭಾವನೆ ಮೂಡಿಸಿತ್ತು, ಸರ್ಕಾರದ ಕಾಳಜಿ ಕಂಡು ಜನರು ಕೂಡಾ ಜೈ ಎಂದಿದ್ರು, ಆದ್ರೆ ಆರಂಭದಲ್ಲಿ ಉತ್ಸಾಹ ತೋರಿದ ಸರ್ಕಾರ ನಂತರ ಆದರ ಆದ್ಯತೆಯನ್ನೇ ಮರೆತಿದೆ.
ಎರಡು ವರ್ಷಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಟೇಪ್ ಕತ್ತರಿಸಿ ಉದ್ಘಾಟನೆ ಮಾಡಿದ್ದ ನೂತನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಉದ್ಘಾಟನೆಯ ನಂತರ ಬಿಕೋ ಎನ್ನುತ್ತಿದೆ. ಸೆಪ್ಟಂಬರ್ 2017 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆಂದು ಪ್ರತ್ಯೇಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿತ್ತು.
ಸಿದ್ದರಾಮಯ್ಯ ಸರ್ಕಾರದ ಕೊನೆಯಲ್ಲಿ ತರಾತುರಿಯಲ್ಲಿ ಸ್ಥಾಪನೆಯಾದ ವಿವಿ ಇವತ್ತಿಗೂ ಅದು ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಕಾರಣ, ಕೋಲಾರ ನಗರದ ಟಮಕಾ ಬಳಿ ಓಪನ್ ಯೂನಿವರ್ಸಿಟಿ ಕಟ್ಟದಲ್ಲಿ ಹೊಸ ವಿವಿಯ ಕಚೇರಿ ಆರಂಭಿಸಿ, ಅಲ್ಲಿ ಕೆಲವೊಂದು ಹೊಸ ಕೋರ್ಸ್ಗಳಿಗೆ ತರಗತಿ ಆರಂಭಿಸಿ, ಉಳಿದಂತೆ ಕೋಲಾರದಿಂದ ಸುಮಾರು 10 ಕಿ.ಮೀ ಹೊರಗಡೆ ಸರಿಯಾದ ಸೌಲಭ್ಯಗಳಿಲ್ಲದ ಮಂಗಸಂದ್ರ ಬಳಿ ಹಳೆಯ ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿ ಕೆಲವೊಂದು ತರಗತಿ ನಡೆಸಲಾಗುತ್ತಿದೆ,
ಇಷ್ಟೇಲ್ಲ ಜಂಚಾಟದ ಮಾಡಿಕೊಂಡಿರುವ ಸರ್ಕಾರ ನೂತನ ಕಟ್ಟದಲ್ಲಿ ಕಛೇರಿ ನಿರ್ಮಿಸಿ ಇಲ್ಲಿಯೇ ತರಗತಿಗಳನ್ನು ಪ್ರಾರಂಭಿಸಲು ಮಾತ್ರ ಮುಂದಾಗದಿರುವುದು ವಿಪರ್ಯಾಸ, ದಿಕ್ಕಿಗೊಂದು ಕಛೇರಿ ಮತ್ತು ತರಗತಿಗಳಿರುವುದರಿಂದ ವಿದ್ಯಾರ್ಥಿಗಳು ಅಲೆಮಾರಿಗಳಾಗಿದ್ದಾರೆ.
ಸದ್ಯ ಕಟ್ಟಡದ ಕೊರತೆ ಇದೆ, ಸಾರಿಗೆ ಸಂಪರ್ಕದ ಕೊರತೆ ಇದೆ, ಜೊತೆಗೆ ಸರಿಯಾದ ಭೋದಕ ಭೋದಕೇತರ ಸಿಬ್ಬಂದಿಗಳ ಕೊರತೆ ಎದ್ದುಕಾಣುತ್ತಿದೆ, ಇದರಿಂದ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ಆರಂಭಿಸಿದ ವಿವಿ ಮೂಲೆಗುಂಪಾಗುತ್ತದೆನೋ ಅನ್ನೋ ಅನುಮಾನ ಸ್ಥಳೀಯರದ್ದು.
ಇನ್ನು ವಿವಿಗಳ ನಿರ್ಮಾಣಕ್ಕೆ ಮುಂದಾಗುವ ಸರ್ಕಾರ ಅವುಗಳ ಅಭಿವೃದ್ಧಿ ಕಡೆ ಗಮನ ನೀಡುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಹೊಸ ವಿಶ್ವವಿದ್ಯಾಲಯಕ್ಕೆ 100 ಎಕರೆ ಭೂಮಿ ಮಂಜೂರು ಮಾಡಿದ್ದನ್ನ ಬಿಟ್ರೆ, ಒಂದು ಬಿಡಿಗಾಸು ಅನುದಾನ ನೀಡಿಲ್ಲ, ಜೊತೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ 450-500 ಕೋಟಿ ಅನುದಾನ ಬೇಡಿಕೆ ಇಟ್ಟರೂ ಈ ವರೆಗೂ ಅದರ ಪ್ರಸ್ತಾಪವಿಲ್ಲ.
ಸದ್ಯ 2500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದು ಹೊಸದಾಗಿ, ಪತ್ರಿಕೋಧ್ಯಮ, ಲೈಬ್ರರಿ ಸೈನ್ಸ್, ಕಂಪ್ಯೂಟರ್ ಸೈನ್ಸ್ ಮೂರು ಕೋರ್ಸ್ಗಳನ್ನು ಆರಂಭಿಸಲಾಗಿದೆ ಅನ್ನೋದನ್ನು ಹೊರತು ಪಡಿಸಿದ್ರೆ ಸರ್ಕಾರ ಉತ್ತರ ವಿಶ್ವವಿದ್ಯಾಲಯಕ್ಕೆಂದು ಒಂದು ಬಿಡಿಗಾಸಿನ ಕಾಳಜಿ ವಹಿಸಿಲ್ಲ.