ETV Bharat / state

ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿರುವ ಸಂಸದ ಮುನಿಸ್ವಾಮಿ! - Kolar News

ಕೋಲಾರ ಸಂಸದ ಎಸ್.ಮುನಿಸ್ವಾಮಿ, ರೈತರು ಬೆಳೆದಿರುವ ಬೆಳೆಗಳನ್ನ ತಾವೇ ಖರೀದಿ ಮಾಡಿ ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುತ್ತಿದ್ದಾರೆ.

MP S.Muniswamy stands in the way of the farmers, the needy and the poor
ರೈತರು,ನಿರ್ಗತಿಕರು,ಬಡವರ ನೆರವಿಗೆ ನಿಂತ ಸಂಸದ ಎಸ್.ಮುನಿಸ್ವಾಮಿ
author img

By

Published : Apr 17, 2020, 2:27 PM IST

ಕೋಲಾರ: ಸಂಸದ ಎಸ್.ಮುನಿಸ್ವಾಮಿ ಸಂಕಷ್ಟದಲ್ಲಿರುವ ರೈತರು ಬೆಳೆದಿರುವ ಬೆಳೆಗಳನ್ನ ತಾವೇ ಖರೀದಿ ಮಾಡಿ, ಅವನ್ನು ತಮ್ಮ ಕ್ಷೇತ್ರದಲ್ಲಿನ ಬಡವರಿಗೆ ಹಂಚುವ ಮೂಲಕ ಅತ್ತ ರೈತರಿಗೂ ನೆರವಾಗಿ, ಇತ್ತ ಹಸಿದವರಿಗೂ ಊಟ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.

ರೈತರು, ನಿರ್ಗತಿಕರು, ಬಡವರ ನೆರವಿಗೆ ನಿಂತ ಸಂಸದ ಎಸ್.ಮುನಿಸ್ವಾಮಿ

ಇಂದು ನಗರದ ಗಾಂಧಿ ನಗರದಲ್ಲಿರುವ ತೋಟದ ಮನೆಯಲ್ಲಿ ತಯಾರಾಗುವ ದಾಸೋಹ ಮನೆಗೆ ಭೇಟಿ ನೀಡಿದ ಅವರು, ಪೊಟ್ಟಣದಲ್ಲಿರುವ ಆಹಾರ ತಿನ್ನುವ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಜೊತೆಗೆ ನಗರದ ಹಲವೆಡೆ ಹಸಿದವರಿಗೆ ಊಟದ ಪೊಟ್ಟಣಗಳನ್ನ ಹಂಚಿದ್ರು.

ಇನ್ನು ಲಾಕ್​ಡೌನ್ ಹಿನ್ನೆಲೆ ದೇಶದಾದ್ಯಂತ ರೈತರು ತಾವು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ಅದರಿಂದ ಊಟ ತಯಾರಿಸಿ, ಬಡವರು, ನಿರ್ಗತಿಕರಿಗೆ ಹಂಚುವ ಕಾರ್ಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ.

ಅದೆಷ್ಟೋ ರೈತರು ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿದು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಹಾಗೂ ಪಿಎಂ ಕೇರ್ಸ್​ ನಿಧಿಗೆ 1 ಲಕ್ಷ ದೇಣಿಗೆ ನೀಡಿದ್ದು, ಜಿಲ್ಲೆಯಲ್ಲೂ ನಿರ್ಗತಿಕರಿಗೆ ಅನ್ನ-ಆಹಾರ ಹಂಚುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.