ಕೋಲಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸದ್ಯಕ್ಕೆ ಬೀಳೋದಿಲ್ಲ, ಬೀಳಿಸೋ ಧೈರ್ಯ ಯಾರಿಗೂ ಇಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಕೋಲಾರ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ನಂ-16 ಕ್ಕೆ ಪತ್ನಿ ಶಾಂತಮ್ಮ ಜೊತೆಗೆ ಬಂದು ಶ್ರೀನಿವಾಸಗೌಡ ಮತದಾನ ಮಾಡಿದರು.
ನಂತರ ಉಪ ಚುನಾವಣೆ ಬಗ್ಗೆ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗೋದಕ್ಕೆ ಯಾರೂ ಸಿದ್ಧರಿಲ್ಲ. ಚುನಾವಣೆಗೆ ಹೋದರೆ ಮೈಮೇಲಿರುವ ಕೂದಲು ಸಹ ಉದುರೋಗುತ್ತೆ ಎಂದು ಹೇಳಿದರು. ನಮ್ಮ ಪಕ್ಷ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ದೇವೇಗೌಡರನ್ನು ಭೇಟಿಯಾದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಅವರು ತಿಳಿಸಿದ್ರು.
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಸಿಎಂ ಆದರೆ ನಮ್ಮ ಸಮುದಾಯದವರು ಸಿಎಂ ಆಗಿದ್ದಾರೆ ಎಂದು ಸಂತಸ ಪಡುವುದಾಗಿ ಅವರು ಹೇಳಿದ್ರು.