ಕೋಲಾರ: ಯುವಕನೊಬ್ಬ ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾನು ವಿಷ ಸೇವಿಸುತ್ತಿರುವ ವಿಡಿಯೋವನ್ನು ಆತ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದ.
ಘಟನೆಯ ವಿವರ:
ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮದ ವೆಂಕಟೇಶ್ ಎಂಬಾತ ಎರಡು ದಿನದ ಹಿಂದೆ ಮಾಲೂರು ಹೊರವಲಯದ ನೀಲಗಿರಿ ತೋಪಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಚಾರಣೆ ಆತನ ಮೊಬೈಲ್ ಪರೀಕ್ಷಿಸಿದಾಗ ತಾನೇ ಮದ್ಯಕ್ಕೆ ವಿಷ ಬೆರಸಿ ಕುಡಿದಿರುವ ದೃಶ್ಯಗಳು ಪತ್ತೆಯಾಗಿವೆ.
ಓದಿ: ಬಿಜೆಪಿ - ಜೆಡಿಎಸ್ ಮುಖಂಡರಿಂದ ರಾಜ್ಯಪಾಲರ ಭೇಟಿ: ಕಾಂಗ್ರೆಸ್ ವರ್ತನೆ ಖಂಡಿಸಿದ ಮಾಧುಸ್ವಾಮಿ, ಹೊರಟ್ಟಿ
ತಾನು ಇಷ್ಟಪಟ್ಟಿದ್ದ ಯುವತಿ ತನ್ನನ್ನು ಇಷ್ಟಪಡಲಿಲ್ಲ. 'ನೀನು ನನಗೆ ಮೋಸ ಮಾಡಿದೆ, ಚೆನ್ನಾಗಿರು. ದೇವರು ನೋಡ್ಕೋತಾನೆ..' ಅನ್ನೋ ಬೇಸರದ ಮಾತುಗಳನ್ನಾಡುತ್ತಾ ವಿಷ ಸೇವಿಸಿದ್ದಾನೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.