ETV Bharat / state

ಲಾಕ್​ಡೌನ್ ಎಫೆಕ್ಟ್: ಫಸಲಿಗೆ ಬಂದ ಎಲೆಕೋಸನ್ನು ನಾಶ ಮಾಡಿದ ಅನ್ನದಾತ

ಕೋಲಾರ ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ಮುರಳಿ ಎಂಬ ರೈತ, ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆದಿದ್ದರು. ಈ‌ ಬಾರಿ ಫಸಲು ಚೆನ್ನಾಗಿ ಬಂದಿತ್ತು. ಆದರೆ ಕೊರೊನಾ ಮಹಾಮಾರಿ ರೈತನ ಬದುಕಿನಲ್ಲಿ ಆಟವಾಡಿದೆ. ಮಾರುಕಟ್ಟೆ ಇಲ್ಲದೆ, ತಾನು ಬೆಳೆದಿದ್ದ ಬೆಳೆಯನ್ನು ರೈತನೇ ನಾಶಪಡಿಸಿದ್ದಾರೆ.

author img

By

Published : May 20, 2021, 5:44 PM IST

farmer who destroyed the cabbage in kolar news
ಫಸಲಿಗೆ ಬಂದ ಎಲೆಕೋಸನ್ನು ನಾಶ ಮಾಡಿದ ಅನ್ನದಾತ

ಕೋಲಾರ: ಕೊರೊನಾ ಲಾಕ್​ಡೌನ್ ನಿಂದಾಗಿ ತರಕಾರಿಗಳ ಬೆಲೆ ಕೇಳೋರೆ ಇಲ್ಲದಂತಾಗಿದೆ. ಈ ಪರಿಸ್ಥಿತಿಯಿಂದ ಬೇಸತ್ತ ರೈತನೋರ್ವ ಸುಮಾರು 60ಕ್ಕೂ ಹೆಚ್ಚು ಟನ್ ಎಲೆಕೋಸನ್ನು ನಾಶ ಮಾಡಿರುವಂತಹ ಘಟನೆ ಜಿಲ್ಲೆಯಲ್ಲಿ ಕಂಡುಬಂದಿದೆ.

ಫಸಲಿಗೆ ಬಂದ ಎಲೆಕೋಸನ್ನು ನಾಶ ಮಾಡಿದ ಅನ್ನದಾತ

ಓದಿ: ತರೀಕೆರೆಯಲ್ಲಿ ಅನಗತ್ಯವಾಗಿ ಓಡಾಡುವ ಜನರಿಗೆ 'ಮುಕ್ತಿವಾಹನ' ಹತ್ತಿಸಿ ಶಿಕ್ಷೆ

ಕೋಲಾರ ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ಮುರಳಿ ಎಂಬ ರೈತ, ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆದಿದ್ದು, ಈ‌ ಬಾರಿ ಫಸಲು ಚೆನ್ನಾಗಿ ಬಂದಿತ್ತು. ಆದರೆ ಕೊರೊನಾ ಮಹಾಮಾರಿ ರೈತನ ಬದುಕಿನಲ್ಲಿ ಆಟವಾಡಿದೆ. ಲಾಕ್​ಡೌನ್ ನಿಂದಾಗಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಬೆಲೆ ಸಿಗದ ಹಿನ್ನೆಲೆ ತನ್ನ ಟ್ರ್ಯಾಕ್ಟರ್ ಮೂಲಕ ತಾನೇ ಸುಮಾರು 60 ಕ್ಕೂ ಹೆಚ್ಚು ಟನ್ ಎಲೆಕೋಸನ್ನ ನಾಶಪಡಿಸಿದ್ದಾರೆ.

ಹೊರ ರಾಜ್ಯಗಳಿಂದ ಬರುವ ದಲ್ಲಾಳಿಗಳ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಇದಲ್ಲದೆ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದರೆ ರೈತ ಬೆಳೆದ ಬೆಳೆಗೆ ಒಂದಷ್ಟು ಬೆಲೆ ಸಿಗುವಂತಾಗುತ್ತದೆ. ಆದರೆ ಇದ್ಯಾವುದು ಇಲ್ಲದ ರೈತ ಬೆಳೆದ ಬೆಳೆಯನ್ನ ತಾನೇ ನಾಶ ಮಾಡುತ್ತಿದ್ದಾನೆ. ಒಂದು ಕೆಜಿಗೆ ಕೇವಲ 2 ರೂಪಾಯಿ ಸಹ ಸಿಗದ ಹಿನ್ನೆಲೆ‌ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ‌ದ್ದ ರೈತ ಇದೀಗ ಕೊರೊನಾದಿಂದಾಗಿ ಕೈಸುಟ್ಟುಕೊಂಡು ಸಾಲದ ಹೊರೆಯನ್ನ ಹೊತ್ತುಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.